ಬೆಂಗಳೂರು: ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್ & ಸಹಚರರು ಜೈಲು ಸೇರಿದ್ದು, ಪೊಲೀಸರು
ಮೂರು ತಿಂಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸರಿಂದ ಸಿದ್ಧತೆ ನಡೆದಿದ್ದು, ಜೊತೆಗೆ ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹೇಳಲಾಗಿದೆ.
ಮತ್ತೊಂದು ತಂಡದಿಂದ ಪೇಪರ್ ವರ್ಕ್. ಈ ಮಧ್ಯೆ ಮಹತ್ವದ ಟೆಕ್ನಿಕಲ್ ಎವಿಡೆನ್ಸ್ ಗಳನ್ನ ಪೊಲೀಸರುಕಲೆ ಹಾಕುತ್ತಿದ್ದಾರೆ. ಸಿಐಡಿ ಟೆಕ್ನಿಕಲ್ ಸೆಲ್ನಲ್ಲಿ ಹದಿನೇಳು ಮೊಬೈಲ್ಗಳ ರಿಟ್ರೀವ್ ಪ್ರಕ್ರಿಯೆ ನಡೆದಿದೆ ಎಂದು ತಿಳಿದುಬಂದಿದೆ.
ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್ ರಿಟ್ರೀವ್ ಮಾಡಲು ಪ್ರಕ್ರಿಯೆ ನಡೆದಿದ್ದು, ಕೊಲೆ ಪ್ರಕರಣದಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಹಾಗೂ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್ಗೆ ಬಂದಿದ್ದ ಮಾರ್ಗದ ಸಿಸಿಟಿವಿಗಳ ಸಂಗ್ರಹ ಮಾಡಲಾಗಿದೆ. ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿಯವರೆಗೂ ಕಾರ್ ಮೂಮೆಂಡ್ ಸಿಸಿಟಿವಿ ಸಂಗ್ರಹವಾಗಿದೆ.
ಮೃತದೇಹ ಹೊತ್ತೊಯ್ದ ಕಾರ್ತಿಕ್ & ಟೀಂ ಒಂದು ಕಾರು.ಪ್ರದೋಶ್ ಮತ್ತು ವಿನಯ್ ಹಿಂದೆ ಫಾಲೋ ಮಾಡಿಕೊಂಡು ಬಂದಿದ್ದ. ಪಟ್ಟಣಗೆರೆ ಶೆಡ್ ನಿಂದ ಸುಮ್ಮನಹಳ್ಳಿ ಮೋರಿವರೆಗೂ ಬರೋಬ್ಬರಿ 25 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಂಗ್ರಹ ಮಾಡಿದ್ದು, ಪಟ್ಟಣಗೆರೆ ಶೆಡ್ ನಿಂದ ಆರ್ ಆರ್ ನಗರ ಮುಖ್ಯರಸ್ತೆ, ನಾಯಂಡಹಳ್ಳಿ ಜಂಕ್ಷನ್ ಗೆ ಬಂದಿದ್ದ ಕಾರುಗಳು. ನಾಯಂಡಹಳ್ಳಿಯಿಂದ ಸುಮನಹಳ್ಳಿ ಮಾರ್ಗವಾಗಿ ಹೋಗಿದ್ದ ಆರೋಪಿಗಳು.
ಸುಮನಹಳ್ಳಿ ಮಾರ್ಗವಾಗಿ ನೇರವಾಗಿ ಹೋಗಿ ರಾಜ್ ಕುಮಾರ್ ರೋಡ್ ನಲ್ಲಿ ತಿರುವು ಪಡೆದು, ಆ ಬಳಿಕ ಸುಮನಹಳ್ಳಿ ಬ್ರಿಡ್ಜ್ ಬಳಿ ರಾಜಕಾಲುವೆ ಬಳಿ ಬಂದಿದ್ದ ಆರೋಪಿಗಳು. ಅಪಾಟ್ರ್ಮೆಂಟ್ ರೋಡ್ನಲ್ಲಿ ಹೋಗಿ ಯೂಟರ್ನ್ ತೆಗೆದುಕೊಂಡಿದ್ದರು. ಆ ಬಳಿಕ ಹಿಂದಿದ್ದ ಆರೋಪಿಗಳು ಮೃತದೇಹ ಎಸೆದು ಪರಾರಿಯಾಗಿದ್ದು, ಹೋಗುವಾಗ ಒಂದೇ ದಾರಿಯಲ್ಲಿ ಹೋಗಿ ಬರುವಾಗ ಬದಲಿ ಮಾರ್ಗಗಳನ್ನ ಬಳಸಿದ್ದರು ಎನ್ನಲಾಗಿದೆ.