ಬೆಂಗಳೂರು: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಉದ್ಯಮದಲ್ಲಿ ಪ್ರಖ್ಯಾತಿ ಗಳಿಸಿರುವ VROOMಮೋಟಾರ್ ಸ್ಪೋರ್ಟ್ಸ್ VROOM ಡ್ರ್ಯಾಗ್ ಮೀಟ್ 9ನೇ ಆವೃತ್ತಿಯನ್ನು ಘೋಷಿಸಿದೆ.
ಹೊಸೂರಿನ ಅತ್ಯಾಧುನಿಕ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ ನಲ್ಲಿ 2023ರ ನವೆಂಬರ್ 24ರಿಂದ 26 ರವರೆಗೆ ನಡೆಯಲಿರುವ ರೋಮಾಂಚನಕಾರಿ 3 ದಿನಗಳ ಕಾರ್ಯಕ್ರಮ ವೇಗ, ರೋಮಾಂಚನ ಮತ್ತು ಅತ್ಯಾಧುನಿಕ ಆಟೋಮೋಟಿವ್ ತಂತ್ರಜ್ಞಾನದ ಆಚರಣೆಯಾಗಿದೆ. 2.3 ಕಿ.ಮೀ ಡ್ರ್ಯಾಗ್ ಸ್ಟ್ರಿಪ್ ಮೀಸಲು ಸ್ಥಳದಲ್ಲಿ ನಡೆಯುವ VROOM ಡ್ರ್ಯಾಗ್ ಮೀಟ್, ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಮತ್ತು ಪ್ರೇಕ್ಷಕರಿಗೆ ಅದ್ಭುತ ಮೋಜನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈವೆಂಟ್ ಕುರಿತು ಉತ್ಸಾಹದಿಂದ ಮಾತನಾಡಿದ VROOM ಮೋಟಾರ್ ಸ್ಪೋರ್ಟ್ಸ್ ಸಂಸ್ಥಾಪಕ ತಾರಿಕ್ ಮೊಹ್ಸಿನ್, ?VROOM ಡ್ರ್ಯಾಗ್ ಮೀಟ್ ಮೋಟಾರ್ ಸ್ಪೋರ್ಟ್ಸ್ ಅನ್ನು ಮೀರಿದ ಮನರಂಜನೆ ನೀಡಲಿದೆ. ಭಾರತದಲ್ಲಿ ರೇಸರ್ ಗಳ ತಡೆಯಿಲ್ಲದ ಶಕ್ತಿ ಮತ್ತು ರೇಸ್ ಟ್ರ್ಯಾಕ್ ಗಳಲ್ಲಿ ವೇಗದ ಮೇಲೆ ಬೆಳೆಯುತ್ತಿರುವ ಆಸಕ್ತಿಯ ಉತ್ಸಾಹಭರಿತ ಆಚರಣೆಯಾಗಿದೆ.
ಇಲ್ಲಿಯವರೆಗೆ ಬಂದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಮತ್ತು ಇನ್ನೂ ಹೆಚ್ಚಿನ ಪ್ರೇಕ್ಷಕರು, ಹೆಚ್ಚಿನ ಸಂಖ್ಯೆಯ ರೇಸರ್ ಗಳು, ಸೂಪರ್ ಬೈಕ್ ಗಳು, ಸೂಪರ್ ಕಾರ್ ಗಳ ಪ್ರದರ್ಶನ ಮತ್ತು ರೋಮಾಂಚನಕಾರಿ ಡ್ರಿಫ್ಟಿಂಗ್ ಸ್ಟಂಟ್ ಗಳ ಭರವಸೆಯೊಂದಿಗೆ 9ನೇ ಆವೃತ್ತಿಯನ್ನು ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಮುಂಬರುವ VROOMಡ್ರ್ಯಾಗ್ ಮೀಟ್ 9ನೇ ಆವೃತ್ತಿಯು ವರ್ಷಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸುರಕ್ಷಿತ ಮೋಟಾರ್ ಸ್ಪೋರ್ಟ್ಸ್ ಸಂಸ್ಕೃತಿಯ ಬದ್ಧತೆಯ ಫಲಿತಾಂಶವಾಗಿದೆ. ನಿರಂತರ ಪ್ರಯತ್ನಗಳ ಮೂಲಕ ಈ ಸಂಭ್ರಮವನ್ನು ಬರಮಾಡಿಕೊಳ್ಳುತ್ತಿದ್ದೇವೆ.
ರೇಸರ್ ಗಳು ಮತ್ತು ಮೋಟಾರ್ ಸ್ಪೋರ್ಟ್ಸ್ ಉತ್ಸಾಹಿಗಳಿಗೆ ಡ್ರ್ಯಾಗ್ ರೇಸಿಂಗ್ ರೋಮಾಂಚನವನ್ನು ಅನುಭವಿಸಲು ನಿಯಂತ್ರಿತ ಮತ್ತು ಸುರಕ್ಷಿತ ವೇದಿಕೆ ಕಲ್ಪಿಸಿದ್ದೇವೆ. ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಬೆಂಬಲದೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮೋಟಾರ್ ಸ್ಪೋರ್ಟ್ಸ್ ಚಮತ್ಕಾರ ಹಾಗೂ ರೋಮಾಂಚನವನ್ನು ನೀಡಲು ಸಿದ್ಧರಾಗಿದ್ದೇವೆ ಎಂದದು ತಿಳಿಸಿದ್ದಾರೆ.
VROOM ಎಂದು ಹೆಸರುವಾಸಿಯಾಗಿರುವ VROOMಮೋಟಾರ್ ಸ್ಪೋರ್ಟ್ಸ್ ಭಾರತದಲ್ಲಿ ವಿವಿಧ ಮೋಟಾರ್ ಸ್ಪೋರ್ಟ್ಸ್ ವಿಭಾಗಗಳನ್ನು ಉತ್ತೇಜಿಸುವ ಧ್ಯೇಯದೊಂದಿಗೆ 2016ರಲ್ಲಿ ಮೋಟಾರ್ ಸ್ಪೋರ್ಟ್ಸ್ ಉದ್ಯಮಕ್ಕೆ ಕಾಲಿಟ್ಟಿತು. ದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮೋಟಾರ್ ಸ್ಪೋರ್ಟ್ಸ್ ಸಂಸ್ಕೃತಿಯ ಪ್ರೇರಕ ಶಕ್ತಿಯಾಗಿ ಕಂಪೆನಿಯು ತ್ವರಿತವಾಗಿ ಬೆಳೆಯಿತು. VROOMಡ್ರ್ಯಾಗ್ ಮೀಟ್, ನಿರ್ದಿಷ್ಟ, ಅಗಾಧವಾದ ಜನಪ್ರಿಯತೆ ಮತ್ತು ಬೆಂಬಲವನ್ನು ಗಳಿಸುವ ಮೂಲಕ ಭಾರತದಲ್ಲಿ ಪ್ರಧಾನ ರೇಸಿಂಗ್ ಈವೆಂಟ್ ಸ್ಥಾನ ಪಡೆದುಕೊಂಡಿದೆ.
ಭಾರತದಲ್ಲಿ ಉನ್ನತ ಕಾರ್ಯಕ್ಷಮತೆಯ ವಾಹನಗಳ ತಯಾರಿ ಹೆಚ್ಚುತ್ತಿದೆ ಮತ್ತು ಬೈಕಿಂಗ್ ಸಂಸ್ಕೃತಿ ಜನಮೆಚ್ಚುಗೆ ಗಳಿಸುತ್ತಿರುವುದು ಡ್ರ್ಯಾಗ್ ರೇಸಿಂಗ್ ನ ಮುಂದುವರಿದ ಬೆಳವಣಿಗೆಗೆ ವೇದಿಕೆಯಾಯಿತು.