ಮೈಸೂರು: ಬೆಂಗಳೂರು ಜೆ.ಸಿ. ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ, ಓಂ ಶ್ರೀ ಸಾಯಿರಾಂ ಸಾಂಸ್ಕöÈತಿಕ ಕಲಾ ವೇದಿಕೆಯ, ಪ್ರಧಾನ ಕಾರ್ಯದರ್ಶಿ ಮೈಸೂರು ಮಂಜುಳ(ಜೂ. ಮಾಲಾಶ್ರೀ)ರವರ ನೇತೃತ್ವದಲ್ಲಿ, ಜನವರಿ ೨೯ರಂದು ಗುರುವಾರ ಮಧ್ಯಾಹ್ನ ೨ ರಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳು ಹಾಗೂ ಸಾಧಕರುಗಳಿಗೆ ಕಲಾ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ, ಪಾಲಹಳ್ಳಿ ಮಠಾಧ್ಯಕ್ಷರಾದ ಡಾ: ಶ್ರೀಶ್ರೀ ಸಿದ್ದರಾಜ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಸಮಾರಂಭದ ಉದ್ಘಾಟನೆ ನೆರವೇರಿಸುವವರು ವಿಜಯನಗರ ಶಾಸಕರಾದ ಎಂ.ಕೃಷ್ಣಪ್ಪ ರವರಿಂದ, ಪ್ರಶಸ್ತಿ ಪ್ರದಾನ ಮಾಡುವವರು ಗೋವಿಂದರಾಜ ನಗರ ಶಾಸಕರಾದ ಪ್ರಿಯಕೃಷ್ಣ ರವರಿಂದ ನೆರವೇರಲಿದೆ, ವಿಶೇಷ ಆಹ್ವಾನಿತರಾಗಿ ವಿಧಾನ ಪರಿಷತ್ ಸದಸ್ಯೆ, ಚಲನಚಿತ್ರ ನಟಿ ಉಮಾಶ್ರೀ, ಕರ್ನಾಟಕ ರಾಜ್ಯ ಮಹಿಳ ಆಯೋಗ ಅಧ್ಯಕ್ಷೆ ಡಾ||ನಾಗಲಕ್ಷಿ÷್ಮ ಚೌದರಿ, ಐ.ಎ.ಎಸ್. ಅಧಿಕಾರಿ ಕೆ.ಎಂ. ಗಾಯತ್ರಿ, ಚಿತ್ರನಟರಾದ ಶಶಿಕುಮಾರ್, ಗಿರಿಜಾ ಲೋಕೇಶ್, ಶಶಿಧರ್ ಕೋಟೆ ಮಿಮಿಕ್ರಿ ಗೋಪಿ, ಎಂ.ಎನ್.ಸುರೇಶ್, ಮೈಸೂರಿನ ಗೋಲ್ಡನ್ ಸುರೇಶ್, ಡಾ|| ಎಸ್.ಮಂಜುನಾಥ್, ಪಿ. ಸುಜ್ಞಾನ ಮೂರ್ತಿ, ಮಾರುತಿ ಮೆಡಿಕಲ್ ಮಹೇಂದ್ರ ಮುನ್ನೋತ್, ದಯಾನಂದ್, ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರದಿ: ಜಿ.ಎಲ್.ಸಂಪಂಗಿರಾಮುಲು
ಓಂ ಶ್ರೀ ಸಾಯಿರಾಂ ಸಾಂಸ್ಕöÈತಿಕ ಕಲಾ ವೇದಿಕೆಯ ವತಿಯಿಂದ ಕಲಾ ಸಾಮ್ರಾಟ್ ಸ್ಟಾರ್ ಅವಾರ್ಡ್ ಪ್ರಶಸ್ತಿ ಪ್ರದಾನ



