ಚಿಕ್ಕಬಳ್ಳಾಪುರ: ಗ್ರಾಪಂ ಗ್ರಂಥಾಲಯಗಳ ಗ್ರಂಥಪಾಲಕರು ಜಿಲ್ಲೆಯಲ್ಲಿ ನಾನಾ ಸಮಸ್ಯೆಗಳನ್ನ ಎದುರಿಸುತ್ತಿದ್ದು ಈ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಿ ಕೊಳ್ಳಲು ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಅರಿವು ಮತ್ತು ಮಾಹಿತಿ ಕೇಂದ್ರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಅಶ್ವತ್ ಹೇಳಿದರು.
ಅವರು ಚಿಕ್ಕಬಳ್ಳಾಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಗ್ರಾಪಂ ಗ್ರಂಥಾಲಯ ಅರಿವು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನವಾಗಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ ಸರ್ಕಾರವುಗ್ರಾಪಂ ಅರಿವು ಮತ್ತು ಮಾಹಿತಿ ಕೇಂದ್ರಗಳನ್ನಾಗಿ ಮರು ಪದ ನಾಮಿಕರಿಸಿದೆ.
ಈ ಬಗ್ಗೆ ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರಲ್ಲಿ ಖುಷಿ ಮೂಡಿದೆ. ಸ್ಥಳೀಯಾಡಳಿತಗಳು ಗ್ರಾಪಂಗಳಿಗೆ ಸಾರ್ವಜನಿಕ
ಗ್ರಂಥಾಲಯ ಇಲಾಖೆಯಿಂದ ವರ್ಗಾವಣೆಗೊಂಡಿರುವ ಗ್ರಂಥಪಾಲಕರು ವಿವಿಧ ಸಮಸ್ಯೆಗಳನ್ನ ಎದುರಿಸಿದ್ದು ಆ ಎಲ್ಲಾ ಸಮಸ್ಯೆಗಳನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು.
ಎಂದರಲ್ಲದೆ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಮಸ್ಯೆಗಳಾದ ಪ್ರತಿ ತಿಂಗಳ ವೇತನ ದಿನಪತ್ರಿಕೆ ಶುಚಿತ್ವದ ಹಣ, ಪ್ರತಿ ತಿಂಗಳು ಪಾವತಿ ಮಾಡಲು ಜಿಪಂ ಅಧಿಕಾರಿಗಳ ಬಳಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹಾಗೂ ಮೇಲ್ವಿಚಾರಕರ ಸಮಸ್ಯೆಗಳಿಗೆ ಬೆನ್ನೆಲು ಬಾಗಿ ನಿಲ್ಲುವುದಾಗಿ ತಿಳಿಸಿದರು.
ಇದೇ ವೇಳೆ ಗೌರಿಬಿದನೂರು ತಾಲೂಕು ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಪದಾಧಿಕಾರಿಗಳ ಆಯ್ಕೆ: ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಗ್ರಾಪಂ ಗ್ರಂಥಾಲಯ ಅರಿವು ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘ ಎರಡನೇ ಅವಧಿಗೆ ಮುದ್ದೇನಹಳ್ಳಿ ಗ್ರಾಪಂ ಗ್ರಂಥಾಲಯದ ಗ್ರಂಥಪಾಲಕರಾದ ಅಶ್ವತ್ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ ಜಿಲ್ಲಾ ಗೌರವಾಧ್ಯಕ್ಷರಾಗಿ ಕೆಂಪಣ್ಣ ಗೌರಿಬಿದನೂರು ತಾಲೂಕು ಅಧ್ಯಕ್ಷರಾಗಿ ಗಿರಿನಾಯಕ್, ಅಶ್ವಥ್ ನಾರಾಯಣ್, ಸದಾಶಿವ ಗುಡಿಬಂಡೆ ತಾಲೂಕು ಅಧ್ಯಕ್ಷರಾಗಿ ನಾರಾಯಣಸ್ವಾಮಿ, ಬಾಗೇಪಲ್ಲಿ ವೆಂಕಟೇಶ್, ಶಿಡ್ಲಘಟ್ಟ ದೇವಣ್ಣ, ಚಿಂತಾಮಣಿ ಶಂಕರಪ್ಪ ನೂತನವಾಗಿ ಆಯ್ಕೆಯಾದರು.
ಇನ್ನು ಜಿಲ್ಲಾ ಪದಾಧಿಕಾರಿಗಳಾಗಿ ಲಕ್ಕೇಗೌಡ, ಶಂಕರಪ್ಪ, ಚಿಕ್ಕನಂಜಪ್ಪ, ನಿರ್ಮಲ, ನಂಜುಂಡಪ್ಪ, ರುಕ್ಮಿಣಿಯಮ್ಮ ಡಿ ಪಾಳ್ಯ ನಾಗರಾಜ ,ಕೈವಾರ ಶ್ರೀನಿವಾಸ ಚನ್ನಕೇಶವ, ರೇವಣ್ ಕುಮಾರ, ದಾಸಪ್ಪ ಸುಮಿತ್ರಮ್ಮ ಆಯ್ಕೆ ಮಾಡಲಾಯಿತು. ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಮೇಲ್ವಿಚಾರಕರು ಈ ಭಾಗವಹಿಸಿದ್ದರು.