ಚನ್ನರಾಯಪಟ್ಟಣ: ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕಲೆಯ ಬಗ್ಗೆ ಹವ್ಯಾಸ ರೂಢಿಸಿದರೆ ದುಶ್ಚಟ ಬರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ಮೂರ್ತಿ ಹೇಳಿದ್ದಾರೆ.
ದೇವನಹಳ್ಳಿ ತಾಲೂಕು ನಲ್ಲೂರು ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ನಲ್ಲೂರು ವಲಯದ ನೃತ್ಯ ಭೂಮಿ ಡ್ಯಾನ್ಸ್ ಅಕಾಡೆಮಿಯ ಎರಡನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ ಶಾಲಾ ಮಕ್ಕಳಿಗೆ ಸತ್ಯ ಭೂಮಿ ಅಕಾಡೆಮಿ ವತಿಯಿಂದ ನೃತ್ಯ ಯ ಸಂಗೀತ ಭರತನಾಟ್ಯ ಜಾನಪದ ಉತ್ಸವಗಳನ್ನು ಕಲಿಸುತ್ತಿದ್ದಾರೆ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ ಎಂದು ಹೇಳಿದರು.
ಪಶುವೈದ್ಯರಾದ ಮೇಯರ್ ಮುತ್ತಣ್ಣ ಮಾತನಾಡಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಇಂತಹ ನೃತ್ಯ ಕಾರ್ಯಕ್ರಮಗಳು ಮಾಡುವದರಿಂದ ಮಕ್ಕಳಲ್ಲಿ ಕಲೆ ಜನಪದ ಉಳಿಯುತ್ತದೆ ಮಕ್ಕಳು ಸಹ ಚಲನಚಿತ್ರ ರಂಗಗಳಲ್ಲಿ ಭಾಗವಹಿಸುವುದಕ್ಕೆ ಪ್ರೋತ್ಸಾಹ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಾರುತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್ಎಮ್ ರಮೇಶ್ ವಕೀಲರಾದ ಆನಂದ್ ಗ್ರಾಪಂ ಮಾಜಿ ಉಪಾಧ್ಯಕ್ಷ ಮಮತಾ ಕೃಷ್ಣ ಚಿತ್ರರಂಗದ ನಿರ್ಮಾಪಕರಾದ ಯಲಿಯೂರು ಮುನಿ ನಾರಾಯಣಪ್ಪ ಮಲ್ಲೇನಹಳ್ಳಿ ಮುಖಂಡ ಕೃಷ್ಣಪ್ಪ ಹಾಗೂ ನೃತ್ಯ ಭೂಮಿಯ ಡ್ಯಾನ್ಸ್ ಅಕಾಡೆಮಿಯ ಶಿಕ್ಷಕರು ನಲ್ಲೂರು ದೇವ ನಾಯಕನಹಳ್ಳಿ ಬಿದಲ್ಪುರ ರೆಡ್ಡಿಹಳ್ಳಿ ಸುತ್ತಮುತ್ತ ಗ್ರಾಮಸ್ಥರು ಇನ್ನು ಮುಂತಾದವರು ಹಾಜರಿದ್ದರು.