ನವದೆಹಲಿ: ವಿಶ್ವದ ಆರ್ಥಿಕತೆಯಲ್ಲಿ ಭಾರತ ಉನ್ನತ ಸ್ಥಾನದತ್ತ ಮುನ್ನುಗ್ಗುತ್ತಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಸಾಧಾನೆಗಳ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬೆಳಕು ಚೆಲ್ಲಿದ್ದಾರೆ.ಇಂದು ಸಂಸತ್ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಯವರು, ಸ್ವಾತಂತ್ರ್ಯ ಅಮೃತಮಹೋತ್ಸವದ ಕಾಲದಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಇದು ನನ್ನ ಮೊದಲ ಬಜೆಟ್ ಅಧಿವೇಶನ ಎಂದು ಹೇಳಿದ್ದಾರೆ.
ಆರ್ಥಿಕತೆಯಲ್ಲಿ ಭಾರತ ಇಂದು ಮುನ್ನುಗುತ್ತಿದೆ. 2023 ದೇಶಕ್ಕೆ ಐತಿಹಾಸಿಕ ವರ್ಷವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಟ್ಯಾಗ್ ಅನ್ನು ಉಳಿಸಿಕೊಂಡಿದೆ ಎಂದು ಪ್ರತಿಪಾದಿಸಿದರು.”2023 ವರ್ಷವು ಭಾರತಕ್ಕೆ ಐತಿಹಾಸಿಕ ವರ್ಷವಾಗಿತ್ತು, ಜಾಗತಿಕ ಬಿಕ್ಕಟ್ಟಿನ ಹೊರತಾಗಿಯೂ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯಿತು. ಸತತ ಎರಡು ತ್ರೈಮಾಸಿಕಗಳಲ್ಲಿ ಭಾರತವು ಶೇಕಡಾ 7.5 ರಷ್ಟು ಬೆಳವಣಿಗೆ ಸಾಧಿಸಿದೆ” ಎಂದು ಅವರು ಕೇಂದ್ರ ಸರ್ಕಾರದ ಪರವಾಗಿ ಸಂಸತ್ತಿನಲ್ಲಿ ಹೇಳಿದರು.
ನಾವು ಇಂದು ನೋಡುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಅಭ್ಯಾಸಗಳ ವಿಸ್ತರಣೆಯಾಗಿದೆ. ನಾವು ಬಾಲ್ಯದಿಂದಲೂ ‘ಗರೀಬಿ ಹಟಾವೋ’ ಘೋಷಣೆಯನ್ನು ಕೇಳಿದ್ದೇವೆ. ಇಂದು, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಬಡತನವನ್ನು ದೊಡ್ಡ ಪ್ರಮಾಣದಲ್ಲಿ ನಿವಾರಿಸುವುದನ್ನು ನಾವು ನೋಡುತ್ತೇವೆ ಎಂದರು.
ವಿಕಸಿತ ಭಾರತ ಸಂಕಲ್ಪ ಸಿದ್ದಿ ಕಾನೂನು ಮಾಡಲಾಗಿದೆ. ಬ್ರಿಟೆಷರ ಕಾಲದ ಕಾನೂನನ್ನು ಬದಲಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿಹೊಸ ಕಾನೂನಿನಿಂದಾಗಿ ಜನರಿಗೆ ಅಧಿಕಾರ ಸಿಗಲಿದೆ.ಚಂದ್ರಯಾನ 3ಯಶಸ್ವಿಯಾಗಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ರಾಮಮಂದಿರ ನಿರ್ಮಾಣ ಶತಮಾನದ ಕನಸಾಗಿತ್ತು. ಅದು ಇಂದು ನನಸಾಗಿದೆ. ಕಳೆದ ವರ್ಷ ಭಾರತ ಸಾಧನೆಗಳಿಂದ ತುಂಬಿತ್ತು. ಅನೇಕ ಯಶಸ್ಸು ಲಭಿಸಿತು. ಜಿ20 ಶೃಂಗಸಭೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಏಷ್ಯಾನ್ಗೇಮ್ಸ್ನಲ್ಲಿ 100 ಚಿನ್ನದ ಪದಕ ಗಳಿಸಲಾಗಿದೆ. ಚಂದ್ರ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿ ಭಾರತ ಸಾಧನೆ ಮಾಡಿದೆ. ಯಾರೂ ಇಳಿಸದ ಜಾಗದಲ್ಲಿ ನೌಕೆ ಇಳಿಸಿ ಯಶಸ್ವಿಯಾಗಿದೆ. ತ್ರಿವಳಿ ತಲಾಕ್ಗೆ ಕಠಿಣ ಕಾನೂನು ಜಾರಿಗೆ ತಂದಿಎ ಎಂದ ಹೇಳುವ ಮೂಲಕ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.