This is the title of the web page
This is the title of the web page

`ಸರ್ಕಾರಿ ಶಾಲೆ H8’ ಸಿನಿಮಾಗೆ ಆಯ್ಕೆಯಾದ ಪಾವಗಡದ ಹಳ್ಳಿ ಪ್ರತಿಭೆ ಹರೀಶ್‍ಗೆ ಶುಭ ಕೋರಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು

ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವ `ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ‘ ಸದಾ ಕಲಾವಿದರನ್ನು ಪ್ರೋತ್ಸಾಹಿಸಿ, ಹಲವಾರು ಅವಕಾಶಗಳ ಜೊತೆಗೆ ಉತ್ತಮ ವೇದಿಕೆಗಳನ್ನು ನೀಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಪ್ರತಿಷ್ಟಿತ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು ಪಾವಗಡ ತಾಲ್ಲೂಕು ಗುಜ್ಜುನಡು ಗ್ರಾಮದ ಹರೀಶ್ ಎಂಬ ಯುವ ಪ್ರತಿಭೆಗೆ ತಮ್ಮ ಸಂಪೂರ್ಣ ಸಹಕಾರ ನೀಡಿರುತ್ತಾರೆ.

ಹರೀಶ್ ಕುಗ್ರಾಮದ ಬಡ ಕುಟುಂಬದಿಂದ ಬಂದ ಪ್ರತಿಭೆ, ಈ ಪ್ರತಿಭೆ “ಸರ್ಕಾರಿ ಶಾಲೆ H8” ಸಿನಿಮಾ ಗೆ ಆಯ್ಕೆಯಾಗಿರುತ್ತಾನೆ. ಈ ಹಳ್ಳಿ ಪ್ರತಿಭೆ ನಟಿಸುತ್ತಿರುವ ಚಿತ್ರ ಯಶಸ್ವಿಯಾಗಲಿ, ಜೊತೆಗೆ ಹರೀಶ್ ಎಂಬ ಯುವ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಹರಿದು ಬರಲಿ. ಇಂತಹ ಹಳ್ಳಿ ಪ್ರತಿಭೆಗಳಿಗೆ ನಮ್ಮ ಸಂಸ್ಥೆ ಸದಾ ಬೆನ್ನೆಲುಬಾಗಿರುತ್ತದೆ ಎಂದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಶ್ರೀಮತಿ ಸಾಯಿಸುಮನಾ ರವರು ಕೂಡ ಶುಭ ಕೋರಿ ಮಾತನಾಡಿದರು. ನಮ್ಮ ಪಾವಗಡ ತಾಲೂಕಿನ ನಿಡಗಲ್ಲು ಹೋಬಳಿಯ ಗುಜ್ಜುನಡು ಗ್ರಾಮದ ಯುವ ಪ್ರತಿಭೆ ಹರೀಶ್ “ಸರ್ಕಾರಿ ಶಾಲೆ H8” ಸಿನಿಮಾದಲ್ಲಿ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ.

ಈ ಮೊದಲ ಚಿತ್ರ ಈ ಹುಡುಗನಿಗೆ ಉತ್ತಮ ಭವಿಷ್ಯ ರೂಪಿಸಲಿ, ಈ ಚಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ. ನಮ್ಮೂರಿಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಂಜುಪಾವಗಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.