ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಹಾಗೂ ಎನ್‍ಡಿಎ ಸರ್ಕಾರದ ಅವಧಿಯ ಕೊನೆಯ ಬಜೆಟ್ 2023-24 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದಕ್ಕೂ ಮುನ್ನಾ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆದುಕೊಂಡರು.
ಸತತವಾಗಿ ಕಾಗದ ರಹಿತ ಬಜೆಟ್‍ನ ಮೂರನೇ ವರ್ಷದಲ್ಲಿ ಟ್ಯಾಬ್ ಬಳಕೆ ಮಾಡುವ ಮೂಲಕ ಬಜೆಟ್ ಮಂಡನೆಯಲ್ಲಿ ಹೈಟೆಕ್ ಸಂಸ್ಕøತಿಯನ್ನು ಕೇಂದ್ರ ಸಚಿವೆ ಮುಂದುರೆಸಿದರು. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಪೂರ್ಣಾವಯ ಬಜೆಟ್‍ಗೆ ಅವಕಾಶ ಇರುವುದಿಲ್ಲ, ಕೇವಲ ಭರವಸೆಗಳ ಆಯವ್ಯಯವನ್ನು ಸಿದ್ದಪಡಿಸಬಹುದು ಮತ್ತು ಲೇಖಾನುದಾನ ಮಾತ್ರ ಪಡೆದುಕೊಳ್ಳಲು ಅವಕಾಶ ಇದೆ.
ಈ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ಮಂಡನೆಯಾಗುವ ಬಜೆಟ್ ಅನ್ನೇ ಪೂರ್ಣಾವಯ ಆಯವ್ಯಯ ಎಂದು ಪರಿಗಣಿಸಲಾಗುತ್ತಿದೆ. ಇಂದು ಬೆಳಗ್ಗೆ ಲೋಕಸಭೆಗೆ ಆಗಮಿಸುವ ಮುನ್ನಾ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಇಲಾಖೆಯ ಸಹುದ್ಯೋಗಿ ಸಚಿವರಾದ ಡಾ.ಭಗವತ್ ಕಿಶನ್‍ರಾವ್, ಪಂಕಜ್ ಚೌದರಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಂಸತ್‍ನ ತಮ್ಮ ಕಚೇರಿಗೆ ಭೇಟಿ ನೀಡಿದರು.
ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್ ಪ್ರತಿಗೆ ಅಂಗೀಕಾರ ಪಡೆದುಕೊಂಡರು. ಬಳಿಕ ನಡೆದ ಸಚಿವ ಸಂಪುಟಸಭೆಯಲ್ಲಿ ಭಾಗವಹಿಸಿದ್ದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಅದನ್ನು ರಾಜ್ಯಸಭೆಯಲ್ಲೂ ಮಂಡಿಸಲಾಯಿತು.
Leave a Review