ದೆಹಲಿ: ತಮ್ಮ ಸರ್ಕಾರ ಕಿಸಾನ್ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಮೂರನೇ ಅವಧಿಗೆ ಎನ್ಡಿಎ ಮೈತ್ರಿಕೂಟದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂದು ಪ್ರಧಾನಮಂತ್ರಿ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಸಹಿ ಹಾಕಿದರು.
ಸುಮಾರು 9.3 ಕೋಟಿ ರೈತರ ಖಾತೆಗೆ ಜಮೆಯಾಗುವ 20 ಸಾವಿರ ಕೋಟಿ ರೂಪಾಯಿಗಳ ಕಡತಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಮೋದಿ, ತಾವು, ತಮ್ಮ ಸರ್ಕಾರ ಕಿಸಾನ್ ಕಲ್ಯಾಣಕ್ಕೆ ಬದ್ಧವಾಗದೆ. ಇಂದು ರೈರು 17ನೇ ಕಂತಿನ 20 ಸಾವಿರ ಕೋಟಿ ರೂಪಾಯಿ ಹಣಕ್ಕೆ ಸಹಿ ಮಾಡಲಾಗಿದೆ. ತಮ್ಮ ಸರ್ಕಾರದ ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಭಿವೃದ್ಧಿಯಾಗಿದೆ.
ರೈತರು ಕೃಷಿ ಕ್ಷೇತ್ರಕ್ಕೆ ಇನಷ್ಟು ಕೆಲಸ ಮಾಡುತ್ತೇವೆ. ಆಗಾಗಿ ಇಂದು ರೈತರ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಸಹಿ ಹಾಕಲಾಗಿದೆ. ನಮ್ಮದು ಕಿಸಾನ್ ಕಲ್ಯಾಣಕ್ಕೆ ಬದ್ಧವಾಗಿರುವ ಸರ್ಕಾರ ಎಂದು ಮೋದಿ ತಿಳಿಸಿದ್ದಾರೆ.