ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮದಾಬಾದಿನಲ್ಲಿರುವ ಸಬರಮತಿ ಆಶ್ರಮದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜರ್ಮನ್ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರೊಂದಿಗೆ ಗಾಳಿಪಟ ಹಾರಿಸಿದರು. ಆಶ್ರಮಕ್ಕೆ ಆಗಮಿಸಿದ ನಂತರ, ಇಬ್ಬರೂ ನಾಯಕರು ರಾಷ್ಟçಪಿತ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು.
ಮೆರ್ಜ್ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ನಂತರ ಇಬ್ಬರೂ ನಾಯಕರು ಸಬರಮತಿ ನದಿ ದಂಡೆಯಲ್ಲಿ ನಡೆದ ಅಂತಾರಾಷ್ಟಿçÃಯ ಗಾಳಿಪಟ ಉತ್ಸವ ೨೦೨೬ ರಲ್ಲಿ ಭಾಗವಹಿಸಿದ್ದಾರೆ.
ಗುಜರಾತ್ನ ಗೌರವಾನ್ವಿತ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಭಾರತ ಮತ್ತು ಜರ್ಮನಿ ಭಾರತ-ಜರ್ಮನಿ ರಾಜತಾಂತ್ರಿಕ ಸಂಬAಧಗಳ ೭೫ ವರ್ಷಗಳನ್ನು ಮತ್ತು ಭಾರತ-ಜರ್ಮನಿ ಕಾರ್ಯತಂತ್ರದ ಪಾಲುದಾರಿಕೆಯ ೨೫ ವರ್ಷಗಳನ್ನು ಆಚರಿಸುತ್ತಿವೆ. ಈ ನಿಟ್ಟಿನಲ್ಲಿ ಮೆರ್ಜ್? ಭಾರತಕ್ಕೆ ಭೇಟಿ ನೀಡಿದ್ದಾರೆ.
ಗಾಳಿಪಟ ಉತ್ಸವದಲ್ಲಿ ಪ್ರಧಾನಿ ಭಾಗಿ



