ರಾಮನಗರ: ಗ್ಯಾರಂಟಿ ಪರವಾದ ಅಲೆ ಮತದಾರರಲ್ಲಿ ಕಂಡುಬರುತ್ತಿದೆ. ಡಿ.ಕೆ.ಸುರೇಶ್ ನಾಲ್ಕನೆ ಬಾರಿ ಸಂಸದರಾಗುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಶಂಭುಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ 25ನೇ ವಾರ್ಡ್ ಮಂಜುನಾಥನಗರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಅವರು ಡಿ.ಕೆ.ಸುರೇಶ್ ಅವರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ಗುಣಮಟ್ಟ ಸುಧಾರಣೆಯಾಗಿದೆ. ಅಲ್ಲದೆ ಸುರೇಶ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಮನೆಯಲ್ಲೂ ಕಾಂಗ್ರೆಸ್ ಸರ್ಕಾರ ನೀಡುವ ಗ್ಯಾರೆಂಟಿ ಯೋಜನೆಗಳನ್ನು ಸ್ಮರಿಸುತ್ತಿದ್ದಾರೆ ಎಂದರು.
ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷರಾದ ಮಂಗಳ ಶಂಭುಗೌಡ, ಪಾಪಣ್ಣ, ಕೃಷ್ಣ, ನವೀನ್, ಬೈರಪ್ಪ, ಕುಮಾರ್, ನರಸಿಂಹಯ್ಯ, ಶಿವಸ್ವಾಮಿ, ರವಿ, ಅಭಿ ಮತ್ತಿತರರು ಇದ್ದರು.