ಪಂಚಕುಲಾ: ಅರ್ಜುನ್ ದೇಶ್ವಾಲ್ ಅವರ ಭರ್ಜರಿ ರೈಡಿಂಗ್ (13 ಪಾಯಿಂಟ್ಸ್) ಬಲದಿಂದ ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ, ಪ್ರೊ ಕಬಡ್ಡಿ ಲೀಗ್ನಲ್ಲಿ ಸೋಮವಾರ ಗುಜರಾತ್ ಜೈಂಟ್ಸ್ ತಂಡವನ್ನು 45-36 ಪಾಯಿಂಟ್ಗಳಿಂದ ಸದೆಬಡಿಯಿತು.
ದೇಶ್ವಾಲ್ ಅವರಿಗೆ ಶುಭಂ ಶೆಲ್ಕೆ (9 ಪಾಯಿಂಟ್ಸ್), ಸಮಿತ್ ಮಲಿಕ್ (6) ಮತ್ತು ಶೌಲ್ ಕುಮಾರ್ (6) ಬೆಂಬಲ ನೀಡಿದರು.
ಪ್ಯಾಂಥರ್ಸ್ ತಂಡವು ಆರಂಭದಿಂದಲೇ ಪಾರಮ್ಯ ಮೆರೆಯಿತು.ಮಧ್ಯಂತರ ವೇಳೆಗೆ 28-14 ರಿಂದ ಮುನ್ನಡೆ ಪಡೆದ ಪ್ಯಾಂಥರ್ಸ್, ವಿರಾಮದ ಬಳಿಕವೂ ಉತ್ತಮ ಪ್ರದರ್ಶನ ನೀಡಿ, 14 ಪಾಯಿಂಟ್ಸ್ ಅಂತರದ ಗೆಲುವು ಸಾಧಿಸಿತು.
ಎದುರಾಳಿ ತಂಡವನ್ನು ಮೂರು ಬಾರಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.ಜೈಂಟ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಪಾರ್ಟಿಕ್ ದಹಿಯಾ (16 ಅಂಕ) ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಸಹ ಆಟಗಾರ ದೀಪಕ್ ರಾಠಿ ಅವರು ಆರು ಅಂಕ ಗಳಿಸಿದರು.