ಅಹಮದಾಬಾದ್: ಅಜಿಂಕ್ಯ ಪವಾರ್ ಅವರ ಉತ್ತಮ ರೈಡಿಂಗ್ ಬಲದಿಂದ ತಮಿಳ್ ತಲೈವಾಸ್ ತಂಡ, ಭಾನುವಾರ ಪೆÇ್ರ ಕಬಡ್ಡಿ ಲೀಗ್ನ ಪಂದ್ಯದಲ್ಲಿ 42-31ರಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು.
ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ವಿರಾಮದ ವೇಳೆಗೆ 18-14ರಿಂದ ಮುನ್ನಡೆಯಲ್ಲಿದ್ದ ತಲೈವಾಸ್ ತಂಡ ಉತ್ತರಾರ್ಧದಲ್ಲೂ ಉತ್ತಮ ಪ್ರದರ್ಶನ ನೀಡಿತು.
ಅಜಿಂಕ್ಯ ತಮ್ಮ ತಂಡಕ್ಕೆ ಒಟ್ಟು 21 ಪಾಯಿಂಟ್ಗಳನ್ನು ಗಳಿಸಿಕೊಟ್ಟರು. ಅದರಲ್ಲಿ 14 ಪಾಯಿಂಟ್ ರೇಡ್ನಿಂದ ಬಂದಿತ್ತು. ನರೇಂದರ್ ಹೋಶಿಯಾರ್ ಅವರು 6 ಅಂಕಗಳನ್ನು ರೇಡ್ನಿಂದ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಬಾಂಗ್ ತಂಡದ ನವೀನ್ ಕುಮಾರ್ ಮತ್ತು ಆಶು ಮಲಿಕ್ ಅವರ ಆಟ ಗಮನ ಸೆಳೆಯಿತು. ನವೀನ್ 14 ಅಂಕ ಸಂಪಾದಿಸಿದರೆ, ಆಶು 9 ಪಾಯಿಂಟ್ ಗಳಿಸಿಕೊಟ್ಟರು.