ಗುಂಡ್ಲುಪೇಟೆ: ಡಾ ಅಂಬೇಡ್ಕರ್ ರವರು ಸುರಾಜ್ಯದ ಸಂಕೇತ ಆಗಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ! ಮಹೇಶ್ ಚಂದ್ರ ಗುರು ಎಂದು ಹೇಳಿದರು.ಅವರು ಗುಂಡ್ಲುಪೇಟೆ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಅನೇಕ ಮಹನೀಯರು ಸ್ವರಾಜ್ಯದ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಆದರೆ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರು ಸುಖಿ ರಾಜ್ಯದ ಕನಸ್ಸನ್ನು ಕಂಡು ಸಧೃಡ ಸಂವಿಧಾನ ರಚನೆ ಮಾಡಿ ಸುರಾಜ್ಯದ ಸಂಕೇತ ವಾಗಿದ್ದಾರೆ .
ಒಂದು ಸಾವಿರ ವರ್ಷಗಳ ಕಾಲ ದಾಸ್ಯಕ್ಕೆ ಒಳಗಾಗಿದ್ದ ದೇಶದ ಬಹುಪಾಲು ಜನರನ್ನು ದಾಸ್ಯ ದಿಂದ ಮುಕ್ತಿ ಗೊಳಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.
ಇಂದು ಪ್ರತಿಯೊಬ್ಬ ನಾಗರೀಕರು ಶಾಸಕಾಂಗ , ಕಾರ್ಯಾಂಗ ,ಹಾಗೂ ನ್ಯಾಯಾಂಗಗಳಲ್ಲಿ ಉನ್ನತ ಸ್ಥಾನ ಗಳಿಸಿದ್ದರೆ ಅದು ಸಾಂವಿಧಾನಿಕ ಫಲವೇ ಹೊರತು ಬೇರೆನ್ನಲ್ಲ ಎಂಬುದನ್ನು ಗಮನಹರಿಸ ಬೇಕು. ಸಂವಿಧಾನ ಕರಡು ರಚನೆಗಾಗಿ ಏಳು ಜನ ಸದಸ್ಯರನ್ನು ನೇಮಿಸಿದರು ಒಬ್ಬರು ರಾಜೀನಾಮೆ ನೀಡಿದರು ಇನ್ನೊಬ್ಬರು ವಿದೇಶಕ್ಕೆ ಹೋದರು ಇನ್ನು ಇಬ್ಬರು ಅನಾರೋಗ್ಯದ ನಿಮಿತ್ತ ಭಾಗವಹಿಸಲು ಆಗಲಿಲ್ಲ ,
ಹಾಗಾಗಿ ಕೊನೆಗೆ ಸಂವಿಧಾನದ ಸಂಪೂರ್ಣವಾಗಿ ಬರೆಯಲು ಮತ್ತು ಸಿದ್ಧಪಡಿಸುವ ಜವಾಬ್ದಾರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಬ್ಬರ ಮೇಲೆ ಬರುತ್ತದೆ ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಗಲು -ಇರುಳು ಎನ್ನದೆ? ಎರಡು ವರ್ಷ 11 ತಿಂಗಳು 18 ದಿನಗಳು ಭಾರತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಬ್ಬರೇ ರಚಿಸಿದರು ಈ ಸಂವಿಧಾನ 1949 ನವಂಬರ್ 26ರಂದು ಅಂಗೀಕರಿಸಲಾಯಿತು 1950 ಜನವರಿ 26ರಂದು ಸಂವಿಧಾನವನ್ನು ಜಾರಿ ಮಾಡಲಾಯಿತು ಹಾಗಾಗಿ ಕರಡನ್ನು ರಚಿಸುವ ಸಂಪೂರ್ಣ ಭಾರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಒಬ್ಬರ ಮೇಲೆ ಬರುತ್ತದೆ ಊಟ ನಿದ್ದೆ ಇಲ್ಲದೆ ದಿನಗಳನ್ನು ಕಳೆಯುತ್ತಾ ವಿಶ್ವ ಶ್ರೇಷ್ಠ ವಿಶ್ವದ ಅತ್ಯಂತ ದೊಡ್ಡ ಸಂವಿಧಾನವನ್ನು ರಚಿಸಿದರು.
ಜಗತ್ತಿನ ಎಲ್ಲ ದೇಶಗಳ ಸಂವಿಧಾನದ ಬಗ್ಗೆ ಅರಿವಿದ್ದ ಏಕೈಕ ಭಾರತೀಯ ಎಂದರೆ ಅದು ಡಾಕ್ಟರ್ ಅಂಬೇಡ್ಕರ್ ಅವರು ಮಾತ್ರ. ರೈತರ ಕಲ್ಯಾಣ, ಮಕ್ಕಳ ಕಲ್ಯಾಣ ,ಮಹಿಳಾ ಕಲ್ಯಾಣ ಹಾಗೂ ಎಲ್ಲ ಶೋಷಿತ ವರ್ಗಗಳ ಅಭಿವೃದ್ಧಿಯ ರೂವಾರಿ. ಅವರು ಕಾರ್ಮಿಕ ಹಾಗೂ ಕಾನೂನು ಮಂತ್ರಿ ಯಾಗಿ ಎಲ್ಲ ವರ್ಗದ ಜನರಿಗೂ ಹಿತ ರಕ್ಷಣೆಯನ್ನು ಒದಗಿಸಿ ಭಾರತೀಯ ಭಾಗ್ಯ ವಿಧಾತ ರಾದರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ಹೆಚ್ ಎಂ ಗಣೇಶ್ ಪ್ರಸಾದ್ ಅವರು ಮಾತನಾಡಿ ಸರ್ವರಿಗೂ ವಿಶೇಷ ಸ್ಥಾನಮಾನ ಪಡೆಯಲು ಸಂವಿಧಾನದಲ್ಲಿ ಅವಕಾಶಗಳಿವೆ .ಯಾವುದೇ ಕಾರಣಕ್ಕೂ ಕೋಮುವಾದಿ ಹಿಡಿತಕ್ಕೆ ದೇಶವನ್ನು ಬಿಟ್ಟು ಕೊಡಬಾರದು . ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು . ಹಾಗಾಗಿ ಎಲ್ಲರೂ ಸಂವಿಧಾನದ ಬಗ್ಗೆ ಓದಿ ಅರಿವು ಬೆಳಸಿಕೊಳ್ಳಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ಶುಭ ಕೋರಿದ ತಹಶಿಲ್ದಾರರಾದ ರಮೇಶ್ ಬಾಬು ಅವರು ವಿಶ್ವ ದಲ್ಲೇ ಸರ್ವಶ್ರೇಷ್ಠ ಸಂವಿಧಾನ ಆಗಿದೆ .ಸ್ವಾತಂತ್ರ್ಯ ,ಸಮಾನತೆ ಹಾಗೂ ಭಾತೃತ್ವದ ಆಶಯಗಳು ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಪಾಲು ಎಂಬುದಕ್ಕೆ ಪೂರಕವಾಗಿವೆ ಎಂದರುಇದೇ ಸಂದರ್ಭದಲ್ಲಿ ಕಾಡ ಮಾಜಿ ಅಧ್ಯಕ್ಷರಾದ ಹಂಗಳ ನಂಜಪ್ಪ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಪುರಸಭೆಯ ಮುಖ್ಯ ಅಧಿಕಾರಿ ವಸಂತ್ ಕುಮಾರಿ ಪುರಸಭೆ ಸದಸ್ಯರಾದ ಅಣ್ಣಯ್ಯ ಸ್ವಾಮಿ ಮಧುಸೂದನ್ ಶ್ರೀನಿವಾಸ್ (ಕಣ್ಣಪ್ಪ) ಸುಭಾಷ್ ಮಾಡ್ರಹಳ್ಳಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರು ಪಿ ರಾಜಶೇಖರ್ ದಸಂಸ ಮುಖಂಡರಾದ ರಂಗಸ್ವಾಮಿ ಮತ್ತು ನಂಜುಂಡಸ್ವಾಮಿ ಹುಣಸನಪುರ ಕಾವಲು ಪಡೆಯ ಉಪಾಧ್ಯಕ್ಷರು ಸಾಧಿಕ್ ಪಾಷ ಹಿರಿಯ ಕನ್ನಡಪರ ಹೋರಾಟಗಾರರಾದ ಬ್ರಹ್ಮಾನಂದರವರು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಯ ಹೇಮಾವತಿಯವರು ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಾಜಶೇಖರ್ ರವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮೋಹನ್ ಕುಮಾರ ಮತ್ತು ವೃತ್ತ ನಿರೀಕ್ಷಕರು ಪರಶಿವಮೂರ್ತಿ ಸಬ್ ಇನ್ಸ್ಪೆಕ್ಟರ್ ಸಾಹೇಬ್ ಗೌಡ ಹಲವು ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು