ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಲಾಗಿದ್ದ “ಆಧುನಿಕ ಸಮಾಜದಲ್ಲಿ ಭಾರತೀಯ ಧರ್ಮದ ಪ್ರಸ್ತುತತೆ” ಎಂಬ ವಿಷಯದ ಮೇಲೆ ಒಂದು ದಿನದ ವಿಶೇಷ ಸರಣಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ . ಡಿ. ಡೊಮಿನಿಕ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಎಂ.ವಿ. ಉಷಾದೇವಿ, ಡಾ. ರಾಣಿ ತಣಿಗಾಚಲಂ, ಡಾ.ತಬಸ್ಸುಮ್ ಜಾವೀದ್ ಇವರುಗಳಿಂದ ವಿವಿಧ ದೃಷ್ಟಿಕೋನಗಳ ಮೂಲಕ ಭಾರತೀಯ ಆಧುನಿಕ ಸಮಾಜದಲ್ಲಿ ಧರ್ಮದ ಪ್ರಸ್ತುತತೆ ಬಗ್ಗೆ ವಿವಿಧ ಆಯಾಮ ಹಾಗೂ ಪ್ರಚಲಿತ ವಸ್ತುಸ್ಥಿತಿಯ ಬಗ್ಗೆ ವಿಸ್ತಾರವಾಗಿ ವಿಚಾರ ಮಂಡನೆ ಮಾಡಿದರು.
ತದನಂತರದಲ್ಲಿ ಕಾರ್ಯಕ್ರಮದ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ಟಿ. ರಾಜೇಂದ್ರ ಪ್ರಸಾದ್ ರವರು ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಿಷಯದಲ್ಲಿ ವಿಶೇಷ ಸರಣಿ ಉಪನ್ಯಾಸದಿಂದ ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ. ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಿಗೆ ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಹಲವು ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿ ವಿನಿಮಯವಾಯಿತ್ತು.ಇದೇ ಸಂದರ್ಭದಲ್ಲಿ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕ ಪ್ರೊ.ಟಿ.ರಾಜೇಂದ್ರ ಪ್ರಸಾದ್, ವಿಶೇಷ ಆಹ್ವಾನಿತರಾದ ಪ್ರೊ. ಡಿ. ಡೊಮಿನಿಕ್, ಪ್ರೊ. ಎಂ.ವಿ.ಉಷಾದೇವಿ, ಡಾ. ರಾಣಿ ತಣಿಗಾಚಲಂ, ಡಾ.ತಬಸ್ಸುಮ್ ಜಾವೀದ್, ಅರ್ಥಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಮತ್ತು ವಿದ್ಯಾರ್ಥಿ ಮುಖಂಡ ಶ್ರೀಗುರು ರಾಘವೇಂದ್ರ ಹಾಗೂ ತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕರಾದ ಡಾ.ಎಂ. ಗೋವಿಂದರಾಜು, ಡಾ.ಚಂದ್ರಶೇಖರ್, ಡಾ. ದಿವಾಕರ ಟಿ.ಎಸ್, ಡಾ.ಎಂ.ಮಹೇಶ್ವರಪ್ಪ, ವಿಚಾರ ಸಂಕಿರಣ ಕೋರ್ಡಿನೇಟರ್ ಡಾ. ಸಿ.ಎಸ್. ಶಕುಂತಲಾ ಮತ್ತು ಭೊಧಕೇತರ ಸಿಬ್ಬಂದಿಗಳಾದ ನಾಗೇಶ್, ಗಾಯತ್ರಿ, ಉಮಾ ಹಾಗೂ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.