ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಪ್ರಚಾರಕ್ಕೆಂದು ಅಭ್ಯರ್ಥಿಗಳು ತೆರಳಿದಾಗ ತಮ್ಮ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಂಬAಧ ಪ್ರಣಾಳಿಕೆ ಬಿಡುಗಡೆ ಯಾವ ಪಕ್ಷವೂ ಮಾಡಿಲ್ಲ. ಆದರೆ ಅಭ್ಯರ್ಥಿಗಳು ಪ್ರಚಾರಕ್ಕೆಂದು ತೆರಳಿದಾಗ ಮತದಾರರು ತಾವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಶಿರೂರು ಕ್ಷೇತ್ರದಲ್ಲಿ ಏತನೀರಾವರಿ ಯೋಜನೆಯನ್ನು ಇದುವರೆಗೂ ಕಾರ್ಯಗತಗೊಳಿಸಿಲ್ಲ. ಅದರ ಬಗ್ಗೆ ಗಮನ ಹರಿಸುವಂತೆ ಸ್ಥಳಿಯ ಅಭ್ಯರ್ಥಿಯನ್ನು ಒತ್ತಾಯಿಸಿದ್ದಾರೆ. ಈ ಯೋಜನೆಯನ್ನು ತಾವು ಈ ಹಿಂದೆ ಶಾಸಕರಾಗಿದ್ದಾಗಲೇ ಮಂಜೂರು ಮಾಡಿಸಿದ್ದೇ ಆದರೆ ಇದುವರೆಗೂ ಅನುಷ್ಠಾನಗೊಳಿಸಿಲ್ಲ. ನಾವು ಪುನರಾಯ್ಕೆಯಾದರೆ ಅದನ್ನು ಕಾರ್ಯಗತಗೊಳಿಸುವ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಭರವಸೆ ನೀಡಿದ್ದಾರೆ.
ಮತ್ತೊಂದೆಡೆ ದಾವಣಗೆರೆ ಕ್ಷೇತ್ರದ ಮಹಾನಗರ ಪಾಲಿಕೆಯ ವಾರ್ಡ್ವ್ಯಾಪ್ತಿಯೊಂದರ ಕ್ರಾಸ್ಒಂದರಲ್ಲಿ 40 ವರ್ಷ ಕಳೆದರೂ ತಾವು ವಾಸಿಸುವ ಪ್ರದೇಶದಲ್ಲಿ ಯಾವುದೇ ಮೂಲಭೂತ ಸಮಸ್ಯೆ ಪರಿಹರಿಸಿಲ್ಲ. ಹಾಗಾಗಿ ತಾವು ಎದುರಿಸುತ್ತಿರುವ ಮೂಲಭೂತ ಸಮಸ್ಯೆ ನಿವಾರಿಸದಿದ್ದರೆ ಚುನಾವಣಾ ಮತದಾನ ಬಹಿಷ್ಕರಿಸುವುದಾಗಿ ಬ್ಯಾನರ್ ಕಟ್ಟಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈ ಸಮಸ್ಯೆಯನ್ನು ತಾವು ಆಯ್ಕೆಯಾದ ಕೂಡಲೇ ಬಗೆಹರಿಸಿ ಕೊಡುವುದಾಗಿ ಅಭ್ಯರ್ಥಿಗಳು ಭರವಸೆ ನೀಡುತ್ತಿದ್ದಾರೆ. ಒಟ್ಟಾರೆ ಉಪಚುನಾವಣೆಯಲ್ಲೂ ಅಭ್ಯರ್ಥಿಗಳಿಗೆ ಸಮಸ್ಯೆಗಳ ಅಹವಾಲು ಕೇಳಿಬರುತ್ತಿರುವುದು ವಿಶೇಷವಾಗಿದೆ.
ಸ್ಥಳೀಯ ಸಮಸ್ಯೆಗಳ ಈಡೇರಿಸುವ ಭರವಸೆ



