ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿವೀರಪ್ಪ ಮೊಯ್ಲಿ ಅವರ ವಿಶ್ವ ಸಂಸ್ಕೃತಿಯ ಮಹಾಯಾನ ಎಂಬ ಗದ್ಯ ಮಹಾಕಾವ್ಯ ಕೃತಿ ಬಿಡುಗಡೆ ಮಾರ್ಚ್ 2ರಂದು ಚಿಕ್ಕಬಳ್ಳಾಪುರ ನಗರದಲ್ಲಿ ನಡೆಯಲಿದೆ ಎಂದು ವೀರಪ್ಪಮೊಯಿಲಿ ತಿಳಿಸಿದರು.ತಾಲೂಕಿನ ಯಲುವಹಳ್ಳಿ ಗ್ರಾಮದಲ್ಲಿ ನಡೆದ ವಿಶ್ವಸಂಸ್ಕೃತಿಯ ಮಹಾಯಾನ ಎಂಬ ಗದ್ಯ ಮಹಾ ಕಾವ್ಯ ಬಿಡುಗಡೆಯ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರಾಜಕೀಯವಾಗಿ ನನಗೆ ಪುನರ್ಜನ್ಮಕೊಟ್ಟಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಎಂದಗೂ ಮರೆಯುವುದಿಲ್ಲ. ಸಾಹಿತಿ
ಯಾಗಿ ನಾನು ರೂಪುಗೊಳ್ಳಲು, ಸಂಸದನಾಗಿ ಜನರ ಕಷ್ಟಗಳಿಗೆ ಧನಿಯಾಗಲು ಈ ನೆಲ ನನಗೆ ಆಶ್ರಯ ನೀಡಿ ಆಧರಿಸಿದೆ.ನನ್ನ ಕೃತಿಗಳು ದೇಶದ ನಾನಾ ಭಾಗಗಲ್ಲಿ ಬಿಡುಗಡೆ ಕಂಡು ಹೆಸರು ಮಾಡಿವೆ, ನನಗೂ ಹೆಸರು ತಂದುಕೊಟ್ಟಿವೆ. ಆದರೆ ನನ್ನ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ ನನ್ನ ಯಾವೊಂದು ಕೃತಿಯೂ ಲೋಕಾರ್ಪಣೆ ಭಾಗ್ಯ ಕಾಣಲಿಲ್ಲ ಎಂಬ ಕೊರಗಿತ್ತು. ಅದನ್ನು ಇದೇ ಮಾ.2ರಂದು ಈಡೇರಿಸಲಾಗುತ್ತಿದೆ ಎಂದರು.
ಆದಿಚುoಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾ ನಂದನಾಥ ಮಹಾಸ್ವಾಮೀಜಿ ನೇತೃತ್ವದಲ್ಲಿ ನಗರ ಹೊರವಲಯ ಎಸ್ಜೆಸಿಐಟಿ ಕ್ಯಾಂಪಸ್, ಬಿಜಿಎಸ್ ಸಭಾಂಗಣದಲ್ಲಿ ವಿಶ್ವಸಂಸ್ಕೃತಿಯ ಮಹಾಯಾನದ ಮೊದಲ ಸಂಪುಟ ಮಾ.2ರಂದು ಲೋಕಾರ್ಪಣೆ ಕಾಣಲಿದೆ. ಈ ಗದ್ಯ ಮಹಾಕಾವ್ಯ 4 ಸಂಪುಟಗಳಲ್ಲಿ ಹರಡಿಕೊಂಡಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುತ್ತೂರು ಮಠಾಧೀಶರ ಸಹಿತ ಅನೇಕ ಗಣ್ಯರು ಭಾಗಿಯಾಗುವರು.
ಇಡೀ ದಿನ ಸಾಹಿತ್ಯದ ಸಂಭ್ರಮ ಮನೆಮಾಡಲಿದ್ದು, ಹಾಡು ಕುಣಿತ ಚಿಂತನ ಮಂಥನ ಕಾರ್ಯಕ್ರಮಗಳು ನಡೆಯಲಿದ್ದು ನೆಲಮಂಗಲ, ಯಲ ಹಂಕ, ದೇವನಹಳ್ಳಿ ಹೊಸಕೋಟೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ. ಚಿಕ್ಕಬಳ್ಳಾಪುರದ ಜನತೆ
ಹೆಚ್ಚಿನ ಸಂಖ್ಯೆಯಲ್ಲಿ ಸಕಾಲಕ್ಕೆ ಆಗಮಿಸಿಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಬೇಕು ಎಂದರು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಯಲುವಹಳ್ಳಿ ರಮೇಶ್ ವೀರಪ್ಪಮೊಯ್ಲಿ ಅವರಂತಹ ಸರಳ ಸಜ್ಜನ ರಾಜಕಾರಣಿಯನ್ನು ನಾನು ನೋಡಿಯೇ ಇಲ್ಲ. ಅಧಿಕಾರದಲ್ಲಿ ಇದ್ದಾಗ ಇವರು ಮಾಡಿದ ಅಭಿವೃದ್ಧಿಕಾರ್ಯಗಳನ್ನು ಭೇರೆ ಯಾರೂ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ಸೋತರೂ ಕೂಡ ಕ್ಷೇತ್ರದ ನಂಟನ್ನುಕಳೆದುಕೊಳ್ಳದೆ ಸಾಮಾನ್ಯ ಕಾರ್ಯ
ಕರ್ತನಿಗೂ ಸ್ಪಂಧಿಸುವ ದೊಡ್ಡಗುಣ ದವರು.
ಇಂತಹ ನಾಯಕರ ಅಗತ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಇದೆ. ಸಾಹಿತಿಯಾಗಿಯೂ ಕೂಡ ಯಶಸ್ಸನ್ನು ಕಂಡ ಅಪರೂಪದ ರಾಜಕಾರಣಿ. ಅವರ ಕೃತಿಯ ಬಿಡುಗಡೆ ಚಿಕ್ಕಬಳ್ಳಾಪುರದಲ್ಲಿ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕರಾದ ಎಂ. ಶಿವಾನಂದ್, ಎಸ್.ಎಂ.ಮುನಿಯಪ್ಪ, ನಂದಿ ಆಂಜಿನಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜ
ಕುಮಾರ್, ಕೆಪಿಸಿಸಿ ಸದಸ್ಯ ಎಸ್.ಬಿ.ಬಾಷಾ, ಹರ್ಷ ಮೊಯ್ಲಿ, ದೇವನಹಳ್ಳಿ ಮಾಜಿ ಶಾಸಕ ಮುನಿನರಸಿಂಹಯ್ಯ, ಚಿಂತಕ ಮಂಜುನಾಥ್ ಅದ್ಧೆ, ಜಿಲ್ಲಾಮಹಿಳಾ ಅಧ್ಯಕ್ಷೆ ಯಾಸ್ಮಿನ್ ತಾಜ್,ಮಂಗಳಾ ಪ್ರಕಾಶ್, ಯುವ ಮುಖಂಡಯಲವಹಳ್ಳಿ ಜನಾರ್ಧನ್, ಚಂದ್ರಣ್ಣ, ಡಿಜಿಪಿ ವಕೀಲವಿನೋದ್ ಕುಮಾರ್, ಶ್ರೀಧರ್ ಮತ್ತಿತರರು ಇದ್ದರು.