ನೆಲಮಂಗಲ: ಮನುಷ್ಯರ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಹೃದಯಿ ನಾಗರೀಕರು ಮುಂದಾಗ ಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಿ.ಗೋಪಾಲ್ ಹೇಳಿದ್ದಾರೆ.
ಬೇಸಿಗೆಯ ರಣಬಿಸಿಲಿನ ತಾಪಮಾನಕ್ಕೆ ಪ್ರಾಣಿ ಪಕ್ಷಿ ಗಳ ಸಂಕುಲ ಬಳುತ್ತವೆ.
ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಅದರ ಪರಿವೆಯಿಂದ ನಮ್ಮ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕವು ನೀರುಣಿಸಿ- ಜೀವವನ್ನುಳಿಸಿ ನಾಲ್ಕನೇ ವರ್ಷದ ಅಭಿಯೋಜನೆಯನ್ನು ತಾಲೂಕಿನಲ್ಲಿ ರೂಪಿಸಿದೆ ಎಂದರು.ಇದರ ಸಲುವಾಗಿ ಪ್ರತಿ ವರ್ಷದಂತೆ ಶುಕ್ರವಾರದಂದು ತಾಲೂಕು ಪ್ರಮುಖ ಇಲಾಖೆ ಅಧಿಕಾರಿಗಳನ್ನು ಖುದ್ದು ಸಂಪರ್ಕಿಸಿ ಅವರಿಗೆ ಮನವಿ ಪತ್ರವನ್ನು ನೀಡುವ ಮೂಲಕ ತಮ್ಮ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಕುಡಿಯುವ ನೀರು ಆಹಾರವನ್ನು ಒದಗಿಸುವಂತೆ ಮನವಿಯನ್ನು ಮಾಡಲಾಯಿತು.
ಅಧಿಕಾರಿಗಳಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಯುತ ಎಲ್. ಮಧು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎಂ. ಹೆಚ್. ತಿಮ್ಮಯ್ಯ, ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಗಳಾದ ಶ್ರೀಯುತ ಅಮೃತ್ ಅತ್ರೇಶ್, ನಗರಸಭೆ ಪೌರಾಯುಕ್ತರಾದ ಶ್ರೀಯುತ ಮಧುಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿ.
ಪ್ರಾಣಿ ಮತ್ತು ಪಕ್ಷಿಗಳಿಗೆ ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು ಆಹಾರ ಧಾನ್ಯಗಳನ್ನು ಒದಗಿಸಲು ತಮ್ಮ ಇಲಾಖೆಯವರಿಗೆ ಸುತ್ತೋಲೆ ಹೊರಡಿಸುವಂತೆ ಕೋರಲಾಯಿತು. ಈ ವೇಳೆ ಅಧ್ಯಕ್ಷ ಎನ್ ಜಿ ಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಜೀವನ್ ಎನ್ ಆರ್ ಕಾರ್ಯದರ್ಶಿಗಳಾದ ವಿನಯ್ ಪಿ ಗಿರಿಧರ್ ಅಧ್ಯಕ್ಷರಾದ ಮಹಾಂತೇಶ್ ನೆಗಳೂರ ಅವರುಗಳಿದ್ದರು.