ಹನೂರು : ಮೇವು ಅರಸಿ ಜಮೀನತ್ತ ಬಂದಿದ್ದ ಜಿಂಕೆಯನ್ನು ಜಮೀನಿನ ಮಾಲೀಕ ಬಸವಣ್ಣ ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಬಂಡಳ್ಳಿಗ್ರಾಮದಲ್ಲಿ ಜಮೀನಿನು ಕೆಲಸ ಮಾಡುತ್ತಿದ್ದ ವೇಳೆ ಜಿಂಕೆ ಯೊಂದು ಜೋಳದ ಬೆಳೆಯ ಮಧ್ಯೆ ಇರುವುದನ್ನು ನೋಡಿದ ಜಮೀನಿನ ಮಾಲೀಕ ಬಸವಣ್ಣ ಕಾವೇರಿ ವನ್ಯಜೀವಿ ವಲಯ ಹನೂರು ವಿಭಾಗದ ಗಾರ್ಡ್ ಶಿವಲಿಂಗಪ್ಪ ಹಾಗೂ ಸಿಬ್ಬಂದಿ ಚಂದ್ರಶೇಖರ್ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಜಮೀನಿಗೆ ಆಗಮಿಸಿದ ಸಿಬ್ಬಂದಿಗಳು ಜಿಂಕೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಮತ್ತೆ ಕಾಡಿನತ್ತ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಬಸವಣ್ಣನವರ ಸಾಮಾಜಿಕ ಕಳಕಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Leave a Review