ಬೇಲೂರು: ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಲಾಯಿತು.
ಸರ್ಕಾರಿ ಆಸ್ಪತ್ರೆಯಲಿ ಸ್ವಚ್ಛತೆ ಇಲ್ಲದೇ ಬಡವರ ರಕ್ತ ಹಿರುವ ಕೆಲಸವನ್ನು ವೈದ್ಯಧಿಕಾರಿಗಳು ಮಾಡುತ್ತಿದ್ದಾರೆ ಅಲ್ಲದೆ ರಕ್ತ ಪರೀಕ್ಷಾ ಕೇಂದ್ರವಿದ್ದರೂ ಹೊರಗಿನ ಪರೀಕ್ಷಾ ಕೇಂದ್ರಗಳಿಗೆ ಬರೆಯುತ್ತಿದ್ದಾರೆ,
ಜನರಿಕ್ ಔಷದಿ ಅಂಗಡಿ ಇದ್ದರು ಆಸ್ಪತ್ರೆ ಎದುರು ಮೆಡಿಕಲ್ ಗಳಿಗೆ ಬರೆಯುತ್ತಾರೆ, ಡಿ ದರ್ಜೆ ನೌಕರರು ರೋಗಿಗಳ ಜೊತೆ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುವುದರ ಜೊತೇಗೆ ಅವರ ಮೇಲೆ ಹಲ್ಲೆ ಯನ್ನು ನಡೆಸಿರುವ ಪ್ರಸಂಗ ನಡೆದಿದೆ ಆಸ್ಪತ್ರೆಯಲ್ಲಿರುವ ಹಾಸಿಗೆಗಳು ತುಂಬಾ ಗಲೀಜಾಗಿದ್ದು ರೋಗಿಗಳು ಅಸಯ್ಯ ಪಡುವಂತಿದೆ, ಡೆಂಗ್ಯೂ ಕಾಯಿಲೆ ಪರೀಕ್ಷೆ ಕೇಂದ್ರದಲ್ಲಿ ಒಬ್ಬ ರೋಗಿಗೆ ಸುಮಾರು 300 ರಿಂದ 900 ರೂ ತನಕ ಹಣ ಆಗುತ್ತದೆ ಎಂದು ಹೇಳುತ್ತಾರೆ..
ಸರ್ಕಾರಿ ಆಸ್ಪತ್ರೆ ಇರುವುದು ಬಡವರಿಗಾಗಿ ಆದರೆ ಇಲ್ಲಿ ಹಣ ಸುಲಿಗೆ ಹಾಗೂ ಔಷದಿ ಕಮಿಷನ್ ಪಡೆಯಲು ದಾರಿ ನೋಡಿಕೊಂಡಿದ್ದಾರೆ ಇಷ್ಟೆಲ್ಲ ಅವ್ಯವಸ್ಥೆ ಇದ್ದರು ಸ್ಥಳೀಯ ಶಾಸಕರು ಗಮನಹರಿಸುತ್ತಿಲ್ಲ, ವೈದ್ಯಧಿಕಾರಿಗೂ ಬೇಲೂರಿನಲ್ಲಿ ತಂಗಲು ಮನಸ್ಸು ಮಾಡುತ್ತಿಲ್ಲ ಮದ್ಯಾನ ಸಮಯದಲ್ಲಿ ಎಂತಹ ರೋಗಿ ಬಂದರು ಮುಖ್ಯದ್ವಾರವನ್ನು ಬಂದು ಮಾಡಿರುತ್ತಾರೆ, ಕೇಳಿದರೆ ಸ್ವಚ್ಛತೆ ನಡೆಯುತ್ತಿದೆ ಎಂದು ಕಾರಣ ಹೇಳುತ್ತಾರೆ, ಇಷ್ಟೆಲ್ಲ ಸಮಸ್ಯೆ ಇದ್ದು ಅದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕ್ ಅಧ್ಯಕ್ಷ ಬೋಜೇಗೌಡ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಉಪಾಧ್ಯಕ್ಸ ಜಯ ಪ್ರಕಾಶ್, ಅರುಣ್ ಸಿಂಗ್, ರಾಘವೇಂದ್ರ ಹೊಳ್ಳ, ಗಣೇಶ್, ಹುಸೇನ್, ಕುಮಾರ್ ಕಾರ್ಯದರ್ಶಿ ಕಾರ್ತಿಕ್, ನಾಗರಾಧ್ಯಕ್ಷ ರಾಕೇಶ್, ದೀಪು, ಮೋಹಿತ್ ಸೇರಿದಂತೆ ಇತರರು ಇದ್ದರು.