ಕೆಆರ್ ಪುರ: ಕೋರಮಂಗಲದ ಅದ್ವೈತ ಅಕ್ಷಯ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಾರ್ಮಿಕರಿಗೆ ಕೂಲಿ ನೀಡದೆ ವಂಚನೆ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸಾಮರಸ್ಯ ಸಮಿತಿಯ ಕಾರ್ಯಕರ್ತರು ಜಕ್ಕಸಂದ್ರದ ಅಪಾರ್ಟ್ ಮೆಂಟ್ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಮಾತನಾಡಿ, ಅದ್ವೈತ ಅಕ್ಷಯ ಪ್ರೈ.ಲಿ. ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸುರೇಶ್ ಹೆಗ್ಡೆರವರು ನಿಂಗಪ್ಪ ಎಂಬುವರಿಗೆ ಸುಮಾರು ಐದುವರೆ ಲಕ್ಷ ರೂ., ಶಬರಿ ಎಂಬುವರಿಗೆ 13 ಲಕ್ಷ ಹಾಗೂ ಶಿವಪ್ಪ ಅವರಿಗೆ ಐದು ಲಕ್ಷ ಇಪತ್ತೇಳು ಸಾವಿರ ರೂ. ಕೂಲಿ ಸಂಬಳ ನೀಡದೆ ವಂಚಿಸಿದ್ದಾರೆ ಎಂದು ದೂರಿದರು.
ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ ಬಡವರ ಹೊಟ್ಟೆ ಮೇಲೆ ಹೊಡೆಯಲು ಬಂದಿದ್ದಾರೆ ಬಡವರ ನಮ್ಮ ಸಂಘಟನೆ ನಿಲ್ಲುತ್ತದೆ ಅವರಿಗೆ ಈ ಕೂಡಲೇ ಸಂಬಳ ನೀಡಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಅಪಾರ್ಟ್ ಮೆಂಟ್ ಎದುರೇ ಪ್ರತಿಭಟನೆ ಮಾಡುತ್ತಾ ಕೂರುತ್ತೇವೆ ಎಂದು ಎಚ್ಚರಿಸಿದರು.
ಸುರೇಶ್ ಹೆಗ್ಡೆರವರ ಅಪಾರ್ಟ್ ಮೆಂಟ್ ಎದುರು ಗೇಟ್ ಬಳಿ ಕೂಲಿ ಕಾರ್ಮಿಕರು ಹಾಗೂ ಕರ್ನಾಟಕ ಸಾಮರಸ್ಯ ಸಮಿತಿಯ ಕಾರ್ಯಕರ್ತರು ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.ಬಡವರ ಕೂಲಿ ಸಂಬಳ ನೀಡದೆ ಅದರಿಂದ ಇವರು ಸಾಧಿಸುವುದಾದರೂ ಏನು? ಅದೇ ಸಂಬಳ ಬಡವರಿಗೆ ನೀಡಿದರೆ ಕುಟುಂಬ ನಡೆಸುವುದಕ್ಕೆ ಅನುಕೂಲವಾಗುತ್ತದೆ. ಈ ಕೂಡಲೇ ಕೂಲಿ ಕಾರ್ಮಿಕರ ಸಂಬಳ ನೀಡಬೇಕು ಇಲ್ಲದಿದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸೇವಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಚಂದ್ರಪ್ಪ, ನಿಂಗಪ್ಪ, ಶಬರಿ, ಶಿವಪ್ಪ, ಮುನೇಶ್, ಇಂದ್ರಮ್ಮ,ರೇಣುಕಮ್ಮ, ಸುರೇಖ ಮತ್ತಿತರರಿದ್ದರು.