ಪೀಣ್ಯ ದಾಸರಹಳ್ಳಿ: ಯಶವಂತಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 1/1ಚಿ ರಲ್ಲಿ ನೂರಾರು ವರ್ಷಗಳಿಂದ ದಲಿತ ಕುಟುಂಬ ವಾಸವಿದ್ದು .
ಶ್ರೀನಿವಾಸ್ ಎಂಬ ವ್ಯಕ್ತಿ ಯಾವುದೇ ನೋಟಿಸ್ ನೀಡದೆ ಜನಬಲ ತೋಳ್ಬಲ ಬಳಸಿ ಅಮಾಯಕ ದಲಿತ ಕುಟುಂಬಗಳನ್ನು ಬೀದಿಗೆ ತಳ್ಳಿ ಇರುವುದನ್ನು ಖಂಡಿಸಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ಜಯಮ್ಮ ಮತ್ತು ಪದಾಧಿಕಾರಿಗಳಾದ ಲಕ್ಷ್ಮಿ ಮತ್ತೆ ಇತರರು ಈ ಕೃತ್ಯಯನ್ನು ಖಂಡಿಸಿ ಪ್ರತಿಭಟನೆ ಮಾಡಿದರು.
ಕಾನೂನಡಿಯಲ್ಲಿ ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕೆಂದು ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸ್ ಎಂಬುವವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಸುದ್ದಿಗಾರರೊಂದಿಗೆ ಮಾತನಾಡಿ ಈ ಸರ್ವೇ ನಂಬರಲ್ಲಿ ಕೋರ್ಟಿನಲ್ಲಿ ತಡೆಇದ್ದರೂ ಇದ್ದರೂ ನಮ್ಮ ಮನೆಗಳನ್ನು ನೆಲ ಸಮ ಮಾಡಿರುವುದನ್ನು ಖಂಡಿಸಿದರು.