ಗುಂಡ್ಲುಪೇಟೆ: ತಾಲ್ಲೂಕಿ ಶಿಂಡನಪುರ ಗ್ರಾಮ ಪಂಚಾಯಿತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ನಿರ್ಲಕ್ಷೆ ಮತ್ತು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಆರೋಪ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ದಿನಾಂಕ 27/ 12/ 23 ರಿಂದ 29 /12 /23 ವರಗೆ ನಡೆಯುವ ಗೃಹಲಕ್ಷ್ಮಿ ಯೋಜನೆಯ ಕ್ಯಾಂಪನ್ನು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ನಡೆಸಲು ಸರ್ಕಾರ ಆದೇಶ ನೀಡಲಾಗಿದೆ ಅದರಂತೆ 27 12 23ರಂದು ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿಚಾರಿಸಲು ಪಂಚಾಯಿತಿಗೆ ಭೇಟಿ ನೀಡಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ವಿಜಯ ಹಾಗೂ ಕಚೇರಿಯ ಸಿಬ್ಬಂದಿಗಳು ಉಡಾಫೆ ಉತ್ತರ ನೀಡಿ ನಮಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿರುತ್ತಾರೆ.
ಇದರಿಂದ ಗ್ರಾಮದ ಮುಖಂಡರು ಮತ್ತು ಪಂಚಾಯತಿಯ ಸದಸ್ಯರುಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಾದ ಹೇಮಾವತಿಯವರನ್ನು ಕರೆಸಿ ಮಾತನಾಡಿಸಿದಾಗ ಟೆಕ್ನಿಕಲ್ ಟೀಮು ಸದಸ್ಯರನ್ನು ನಾವು ನೇಮಿಸಿದ್ದೇವೆ, ಸ್ವಲ್ಪ ತಡವಾಗಿದೆ ನಾವು ಮಾಹಿತಿಯನ್ನು ಕೂಡ ನೀಡಿದ್ದೇವೆ ಮತ್ತು ಇದು ಯಾರ ಕೆಲಸ ಎಂದು ಹೇಳಿದಾಗ ಇದು ಇಲ್ಲಿನ ಪಂಚಾಯಿತಿಯ ಕೆಲಸ ಮತ್ತು ಪಿ ಡಿ ಓ ಅವರನ್ನು ಕರೆಸಿ ಸಾರ್ವಜನಿಕರ ಮುಂದೆ ಮಾಹಿತಿಯನ್ನು ನೀಡಿದ್ದೇನೆ ಎಂದು ತಿಳಿಸಿದರು.
ಇದಕ್ಕೆ ಸಂಬಂಧಪಟ್ಟಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯ ಸಾರ್ವಜನಿಕರು ಮತ್ತು ಅಧ್ಯಕ್ಷರು ಮತ್ತು ಸದಸ್ಯರುಗಳು ದೂರು ನೀಡಿರುತ್ತಾರೆ ಈ ಬೇಳೆ ಅಧ್ಯಕ್ಷರಾದ ರೇಚಪ್ಪ ಮತ್ತು ಸದಸ್ಯರುಗಳಾದ ಮಹದೇವಸ್ವಾಮಿ ಪ್ರಕಾಶ್ ಮತ್ತು ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು.