ಕೆ ಆರ್ ನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುವ ಮೂಲಕ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ತಕ್ಷಣ ತೈಲ ಬೆಲೆಯನ್ನು ಇಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕೆ ಆರ್ ನಗರ ತಾಲೂಕು ಬಿಜೆಪಿ ಅಧ್ಯಕ್ಷ ಹೊಸೂರು ಧರ್ಮ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಿಗ್ಗೆ 10:30ಕ್ಕೆ ಡಾ. ಬಿ ಆರ್ ಅಂಬೇಡ್ಕರ್ಅವರ ಪ್ರತಿಮೆ ಮುಂಭಾಗ ಸಭೆ ಸೇರಿದ ಬಿಜೆಪಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಜಂಟಿ ಹೋರಾಟ ನಡೆಸಿ ಮೈಸೂರು ಹಾಸನ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಮಿನಿ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಭಾನುವಾರ ರಾತ್ರಿ ಏಕಾಏಕಿ ಪೆಟ್ರೋಲಿಗೆ 3, ಡೀಸೆಲ್ ಲೀಟರಿಗೆ 3.50ಏರಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಮಾಡುತ್ತಿದ್ದು ಚುನಾವಣೆಯಲ್ಲಿ ತಮ್ಮ ಗೆಲುವಿನ ಸಲವಾಗಿ ಪ್ರಣಾಳಿಕೆಯಲ್ಲಿ ಜನಸಾಮಾನ್ಯರ ಅಗತ್ಯವಸ್ತುಗಳ ಬೆಲೆಯನ್ನು ಇಳಿಸುವ ಮೂಲಕ
ತೈಲ ಬೆಲೆಯನ್ನು ಇಳಿಸುವ ಭರವಸೆಯನ್ನು ನೀಡಿದ್ದರು.
ಆದರೆ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದ್ದಲ್ಲದೆ ಸಾಲದ ಸುಳಿಗೆ ಸಿಲುಕಿಸುವ ಜೊತೆಗೆ ಸರ್ಕಾರ ದಿವಾಳಿಯಾಗಿದೆ. ಅದನ್ನು ಸರಿದೂಗಿಸಲು ತೈಲ ಬೆಲೆಯನ್ನು ಏರಿಸುವ ಮೂಲಕ ರಾಜ್ಯದ ಜನತೆಯ ಮೇಲೆ ಬರೆಯನ್ನು ಎಳೆದಿದ್ದಾರೆ ಎಂದು ಆರೋಪಿಸಿದರು.ಸಾಲಿಗ್ರಾಮ ತಾಲೂಕು ಬಿಜೆಪಿ ಅಧ್ಯಕ್ಷ ಸಾ.ರಾ. ತಿಲಕ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಕ್ರೈಂ ಅಟ್ಟಹಾಸವನ್ನು ಮೆರೆಯುತ್ತಿದ್ದು ಆಡಳಿತ ಯಂತ್ರ ಕುಸಿದಿದೆ.
ಸಚಿವರು, ಶಾಸಕರು ತಮ್ಮ ಬೆಂಬಲಿಗರು ಕಾರ್ಯಕರ್ತರೆಂದು ಗುಂಡಾಗಿರಿ ದೌರ್ಜನ್ಯ ನಡೆದರೂ ಕ್ರಮ ಕೈಗೊಳ್ಳದೆ ಅವರ ಬೆಂಬಲಕ್ಕೆ ನಿಂತಿರುವುದು ರಾಜ್ಯದಲ್ಲಿ ಹೆಚ್ಚು ಕ್ರೈಮ್ ಆಗಲು ಕಾರಣವಾಗಿದೆ ಎಂದು ಆರೋಪಿಸಿದರು.ತೈಲಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ದಿನಬಳಕೆಯ ವಸ್ತುಗಳು ಏರಿಕೆಯಾಗ
ಲಿದ್ದು ಜೊತೆಗೆ ಬಸ್ಸಿನ ದರ ಖಾಸಗಿ ವಾಹನಗಳು ಬೆಲೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯಂತೆ ಜನಸಾಮಾನ್ಯರ ಯಾವುದೇ ಅಗತ್ಯ ವಸ್ತುಗಳು ತೈಲ ಬೆಲೆ ಸೇರಿದಂತೆ ಯಾವುದನ್ನು ಹೆಚ್ಚಳ ಮಾಡಬಾರದೆಂದು ಒತ್ತಾಯಿಸಿದರು.
ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್( ಅಯ್ಯಾ) ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಕಾಂಗ್ರೆಸ್ ನಾಯಕರು ಏಕೆ ಈಗ ಇದ್ದಕ್ಕಿದ್ದಂತೆ ಬೆಲೆ ಏರಿಕೆ ಮಾಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಲಿ, ಅಧಿಕಾರದ ಆಸೆಗಾಗಿ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದಕ್ಕೆ ಹಣ ಹೊಂದಿಸಲಾರದ ಸರ್ಕಾರ ಯಾವುದೇ ಸರ್ಕಾರ ಮಾಡಿರಲಾರದಷ್ಟು ಸಾಲವನ್ನು ಮಾಡಿದ್ದು ಸಾಲದು ಎಂದು ಹಣ ಕ್ರೂಡೀಕರಣಕ್ಕಾಗಿ ತೈಲಬೆಲೆ ಸೇರಿದಂತೆ
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ಸರ್ಕಾರವನ್ನು ವಿಸರ್ಜನೆ ಮಾಡಬೇಕು, ಜನರ ಹಿತದೃಷ್ಟಿಯಿಂದ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡಿಯಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಕೆ. ಎಲ್. ಜಗದೀಶ್, ಸಂತೋಷ್ ಗೌಡ, ಉಮೇಶ್, ಮಾಜಿ ಸದಸ್ಯ ಉಮಾಶಂಕರ್, ಬಿಜೆಪಿ ಪದಾಧಿಕಾರಿಗಳಾದ ಸ್ವಪ್ನ ನಾಗೇಶ್ ರಂಗಸ್ವಾಮಿ, ಅಂಬುಜ ಮಾದೇಶ್, ಪ್ರವೀಣ, ವಿಶ್ವನಾಥ್, ಮಹದೇವ ನಾಯಕ, ಹರೀಶ, ಮಂಜುನಾಥ್, ಬಸವರಾಜ್, ಕುಮಾರ್, ರಾಜೇಶ್, ಗೋಪಾಲ್ ರಾಜ್ ಸೇರಿದಂತೆ
ನೂರಾರು ಜನ ಇದ್ದರು. ಪ್ರತಿಭಟನೆಯ ನಂತರಮನವಿ ಪತ್ರವನ್ನು ತಹಸಿಲ್ದಾರ್ ಪೂರ್ಣಿಮಾ ರವರಿಗೆ ಸಲ್ಲಿಸಿದರು ಪಿಎಸ್ಐ ಧನಂಜಯ್ ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.