ರಾಮನಗರ: ಸುಳ್ಳು ದೂರಿನನ್ವಯ 40 ಜನ ವಕೀಲರ ಮೇಲೆ ಐಜೂರು ಠಾಣೆ ಎಸ್ಐ ತನ್ವಿರ್ ಹುಸೇನ್ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ವಕೀಲರ ಸಂಘ ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಧರಣಿ ನಡೆಸಿದರು.
ಸೋಮವಾರ ವಕೀಲ ಪರಿಷತ್ತಿನ ರಾಜ್ಯಾಧ್ಯಕ್ಷ ವಿಶಾಲರಘು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ ವಕೀಲರು ಒಂದು ಕುಟುಂಬವಿದ್ದಂತೆ, ನಮಗೆ ಸಮಸ್ಯೆಗಳು ಎದುರಾದಾಗ ಕಾನೂನಾತ್ಮಕವಾಗಿ ಹೋರಾಟ ಮಾಡೋಣ.
ವಕೀಲರ ಸಂಘಕ್ಕೆ ಅತಿಕ್ರಮಣ ಮಾಡಿದವರ ವಿರುದ್ದ ಕ್ರಮ ವಹಿಸದೆ ಸುಳ್ಳು ದೂರಿನನ್ವಯ 40 ಜನ ವಕೀಲರ ಮೇಲೆ ಎಫ್ಐಆರ್ ದಾಖಲಿಸಿರುವ ಎಸ್ಐ ತನ್ವಿರ್ಹುಸೇನ್ ಅವರನ್ನು ಅಮಾನತ್ತು ಮಾಡಬೇಕು. ಇಂದು (ಮಂಗಳವಾರ) ಸಂಜೆಯೊಳಗೆ ಸೂಕ್ತ ಕ್ರಮ ವಹಿಸದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟಕ್ಕೆ ನಾವೆಲ್ಲರೂ ಇಳಿಯೋಣ ಎಂದರು.
ಪೆÇಲೀಸರು, ನ್ಯಾಯವಾಧಿಗಳು, ಪತ್ರಿಕಾರಂಗಗಳು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅನಿವಾರ್ಯತೆ ಸೃಷ್ಡಿಸಿ ಐಜೂರು ಎಸ್ಐ ಕಾನೂನು ಪಾಲಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಇದರ ಸೂಕ್ಷ್ಮತೆ ಅರಿಯದೆ 40 ವಕೀಲರ ಮೇಲೆ ಒತ್ತಡಕ್ಕೆ ಮಣಿದಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲಿ ಜಿಲ್ಲಾಧಿಕಾರಿ, ಪೆÇೀಲೀಸ್ ವರಿμÁ್ಟಧಿಕಾರಿಗಳು ಸ್ಥಳೀಯವಾಗಿ ಬಗೆಹರಿಸಿದರೆ ಒಳ್ಳೆಯದು ಎಂದರು.
ವಕೀಲರರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ದಕ್ಕೆ ಬರುವ ರೀತಿ ವಕೀಲ ಚಾಂದ್ಪಾಷ ನಡೆದುಕೊಂಡಿದ್ದು, ಈತನ ಬಗ್ಗೆ ಸಂಘದಲ್ಲಿ ಚರ್ಚೆ ನಡೆಸಿ ಮಾನವೀಯ ದೃಷ್ಡಿಯಿಂದ ಅವಕಾಶ ಕೊಟ್ಟ ಪರಿಣಾಮ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಿದೆ. ವಕೀಲರು ಎದರುವ ಅವಶ್ಯಕತೆಯಿಲ್ಲ. ರಾಜ್ಯಾದ್ಯಂತ ವಕೀಲರ ಸಂಘಗಳು ರಾಮನಗರಕ್ಕೆ ಬಂದು ನಿಮ್ಮ ಹೋರಾಟಕ್ಕೆ ನಿಲ್ಲಲಿದ್ದಾರೆ ಎಂದು ಎಚ್ಚರಿಸಿದರು.
ವಕೀಲ ಶಿವಣ್ಣಗೌಡ ಧರಣಿಯಲ್ಲಿ ಮಾತನಾಡಿ ವಕೀಲರ ಹಿತಾಶಕ್ತಿಗೆ ದಕ್ಕೆಯಾದಾಗ ಹೋರಾಟ ನಮಗೆಲ್ಲರಿಗೂ ಅನಿವಾರ್ಯ. ಈ ಘಟನೆಗೆ ಕಾರಣನಾದ ವಕೀಲ ಚಾಂದ್ಪಾಷ 2013 ರಲ್ಲಿ ನ್ಯಾಯಾಂಗದ ಅಧಿಕಾರಿಗಳ ಮೇಲೆ ದೂರು ನೀಡಿ ದಾವೆ ಮಾಡಿದ್ದು ಉಂಟು, 2019ರಲ್ಲಿ ವಕೀಲರ ವಿರುದ್ದವೇ ಪರ್ಯಾಯ ಸಂಘ ರಚನೆಯಂತಹ ಹೇಳಿಕೆ ನೀಡಿರುವುದು. ಇವೆಲ್ಲಕ್ಕೂ ಮೂಲವೇ ಆ ಚಾಂದ್ ಪಾಷ. ಆಗ ಎ.ಡಿ.ದೊಡ್ಡಯ್ಯ ನೇತೃತ್ವದ ಹಿರಿಯ ವಕೀಲರ ತಂಡ ಆಂತರಿಕ ತನಿಖೆ ನಡೆಸಿದಾಗ ಒಟ್ಟಾರೆ ಆತನ ವರ್ತನೆ ಕ್ಷಮಾರ್ಧವಲ್ಲ, ಸಂಘ ಸೂಕ್ತ ಕ್ರಮ ವಹಿಸುವಂತೆ ವರದಿ ನೀಡಿತ್ತು. ಇದೀಗ ಈತನೇ ನ್ಯಾಯಾಂಗ ವ್ಯವಸ್ಥೆಯ ಹಣಕು ಮಾಡುವಂತಹ ಮತ್ತೊಂದು ಪ್ರಕರಣಕ್ಕೆ ಕಾರಣನಾಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಂದ್ಪಾಷ ಆತನಿಗೆ ಈ ಹಿಂದೆಯೂ ಸಂಘದ ವತಿಯಿಂದ ತಿಳುವಳಿಕೆ ನೀಡಲಾಗಿದೆ. ಸಂಘದಿಂದ ಆತನನ್ನು ವಜಾ ಮಾಡಲಾಗಿದೆ. ಇದೀಗ ಮತ್ತೊಂದು ಪ್ರಕರಣಕ್ಕೆ ಕಾರಣನಾಗಿರುವ ಆತನ ವಿರುದ್ದ ಕ್ರಮ ವಹಿಸುವ ಅವಶ್ಯಕತೆಯಿದೆ. ಈ ಬಗ್ಗೆ ಎಲ್ಲರೂ ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರೆಸೋಣ ಎಂದು ಹಿರಿಯ ವಕೀಲ ಶಾಂತಪ್ಪ, ಶಿವಣ್ಣ, ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ಖಜಾಂಚಿ ಮಂಜೇಶ್ಗೌಡ, ಮಂಡ್ಯ ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಬೆಂಗಳೂರು ಸಂಘದ ಪದಾಧಿಕಾರಿ ಅನಿಲ್ಕುಮಾರ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು ಧರಣಿಯಲ್ಲಿ ಭಾಗವಹಿಸಿದ್ದರು.