ಬೇಲೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ, ಬಿಸಿಯೂಟ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನದಲ್ಲಿ ತಾರತಮ್ಯನೀತಿ ಮತ್ತುನೌಕರಿ ಭದ್ರತೆ ನೀಡದೆ ಶೋಷಣೆ ನಡೆಸುತ್ತಿದೆ. ಇದರ ವಿರುದ್ದ ಇದೇ ಫೆಬ್ರವರಿ 16 ರಂದು ಬೇಲೂರಿನಲ್ಲಿ ಸೆಂಟರ್ ಅಫ್ ಇಂಡಿಯನ್ ಟ್ರಡ್ ಯೂನಿಯನ್ಸ್.
ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಬೃಹತ್ ಮೆರವಣಿಗೆ, ಬಹಿರಂಗ ಸಭೆ ನಡೆಸುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾ ಸಿಐಟಿಯು ಉಪಾಧ್ಯಕ್ಷೆ ಇಂದಿರಮ್ಮ ಮತ್ತು ಅಂಗನವಾಡಿ ನೌರರ ಜಿಲ್ಲಾ ಕಾರ್ಯದರ್ಶಿ ಮಂಜುಳಾ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸತತ 50 ವರ್ಷದಿಂದ ಸಕ್ರಿಯವಾಗಿರುವ ಅಂಗನವಾಡಿ ಸಂಘದ ಕಾರ್ಯಕರ್ತರು ಯಾವುದೇ ಸವಲತ್ತುಗಳು ಇಲ್ಲದೆ ಇಂದಿಗೂ ಕಷ್ಟದ ಸ್ಥಿತಿಯನ್ನು ಅನುಭವಿಸುವ ಹೀನ ಪರಿಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ಮಾತ್ರ ಭೇಟಿ ಬಚಾವೋ, ಸ್ತ್ರೀ ಸಬಲೀಕರಣಕ್ಕೆ ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡುತ್ತಾರೆ.
ಆದರೆ ಅಂಗನವಾಡಿ ಕಾರ್ಯಕರ್ತರು ಮಹಿಳೆಯರಲ್ಲವೇ? ಅವರಿಗೆ ಕನಿಷ್ಠ ವೇತನ ಮತ್ತು ಭದ್ರತೆ ಏಕೆ? ನೀಡುತ್ತಿಲ್ಲ ಈ ಬಗ್ಗೆ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ. ಬಹುತೇಕ ಅಂಗನವಾಡಿ ಕಾರ್ಯಕತರು ಬಡತನ ರೇಖೆಗಿಂತ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಇರುವ ಬಿಪಿಎಲ್ ಕಾರ್ಡ್ನ್ನು ತೆಗೆದು ಹಾಕಿ ತೊಂದರೆ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿ ಆಯುಷ್ಮಾನ್ ಕಾರ್ಡ್ ಯಾವ ಆಸ್ಪತ್ರೆಯಲ್ಲಿ ಪ್ರಯೋಜನಕಾರಿಯಾಗುತ್ತಿಲ್ಲ,ನಾವುಗಳು ದುಬಾರಿ ಆಸ್ಪತ್ರೆ ಶುಲ್ಕ ಕಟ್ಟಬೇಕು ಎಂದು ಪತ್ರಕರ್ತರ ಮುಂದೆ ತಮ್ಮ ಆಳಲನ್ನು ತೊಡಿಕೊಂಡರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಸಿಯೂಟದ ನೌಕಕರಿಗೆ ಸೂಕ್ತ ವೇತನ ನೀಡುತ್ತಿಲ್ಲ, 60 ವರ್ಷ ಕಳೆದರೆ ಸಾಕು ಅವರನ್ನು ಸೇವೆಯಿಂದ ವಜಾ ಮಾಡುತ್ತಿದ್ದಾರೆ. ಇನ್ನು ನಿವೃತ್ತಿಯಾದ ಅಂಗನವಾಡಿ ನೌಕರಿಗೆ ಯಾವುದೇ ಹಣ ಮತ್ತು ಪಿಂಚಣಿ ಇಲ್ಲದೆ ಬದುಕು ಮೂರಾಬಟ್ಟೆಯಾಗುತ್ತದೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸಮಾನ ವೇತನವನ್ನು ನೀಡಬೇಕು ಎಂದು ತಿಳಿಸಿದರೂ ಸರ್ಕಾರಗಳು ಮಾತ್ರ ಆದೇಶವನ್ನು ಉಲ್ಲಂಘಿಸಿವೆ.
ಇಂತಹ ಹತ್ತಾರು ಬೇಡಿಕೆ ಮತ್ತು ಬೆಲೆ ಏರಿಕೆ ವಿರುದ್ದ ಇದೇ ಫೆಬ್ರವರಿ 16 ರಂದು ಬೇಲೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.ಬೇಲೂರು ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯದರ್ಶಿ ನಂದೀಶ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಮಾತನಾಡಿದರು.ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಬಿಸಿಯೂಟ ನೌಕರರ ಪದಾಧಿಕಾರಿ ಗೌರಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆ ಶೈಲಾ ಹಾಜರಿದ್ದರು.