ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮುರೆಹಳ್ಳಿ ಗ್ರಾಮಕ್ಕೆ ಕಳೆದ 20 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಿಲ್ಲ ಎಂದು ಗ್ರಾಮ ಪಂಚಾಯಿತಿ ಮುಂಬಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ನಮ್ಮ ಗ್ರಾಮಕ್ಕೆ ಕಳೆದ 20 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರನ್ನು ಪಂಚಾಯಿತಿಯವರು ನೀಡಿಲ್ಲ ಈ ಬಗ್ಗೆ ಈಗಾಗಲೇ ದೂರು ನೀಡಿದರು ಕ್ರಮವಹಿಸಿಲ್ಲ,
ಈ ಹಿಂದೆ ಪಂಚಾಯಿತಿಯಿಂದ ಕುಡಿಯುವ ಉದ್ದೇಶಕ್ಕಾಗಿ ವಿತರಣೆ ಮಾಡಿದ ನೀರು ಕಲುಷಿತವಾಗಿದ್ದು ಪಾತ್ರೆ ತೊಳೆಯಲು ಸಹ ಯೋಗ್ಯವಾಗಿಲ್ಲ,ಪ್ರಸ್ತುತ ಎಲ್ಲಾ ಮನೆಯಲ್ಲೂ ಸಣ್ಣ ಸಣ್ಣ ಮಕ್ಕಳು,ವೃದ್ಧರು ಇರುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ , ಈಗ ಶಾಶ್ವತ ಕುಡಿಯುವ ನೀರಿನ ಪೂರೈಕೆ ಮಾಡುವ ಬಗ್ಗೆ ಪಂಚಾಯಿತಿಯ ಸದಸ್ಯರು,ಅದ್ಯಕ್ಷರು ಹಾಗು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ತಿಳಿಸಿದ್ದಾರೆ,
ಒಂದು ವೇಳೆ ನೀರು ಸರಬರಾಜು ಮಾಡಲುವಿಫಲವಾದರೆ ತಾಲೂಕು ಪಂಚಾಯಿತಿ ಮುಂಬಾಗದಲ್ಲಿ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಗ್ರಾಮದ ರವಿ ತಿಳಿಸಿದರು.ಈ ಹಿಂದೆ ನಮ್ಮ ಪಂಚಾಯಿತಿಯಿಂದ ಯಾವುದೇ ನೀರಿನ ಕೊರತೆ ಇಲ್ಲದೆ ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದೆವು ಆದರೆ ಪ್ರಸ್ತುತ ಚಾಲ್ತಿಯಲ್ಲಿರುವ ಬೋರ್ ವೆಲ್ ನಲ್ಲಿ ನೀರು ಬತ್ತಿ ಹೋಗಿದ್ದು ನೀರಿನ ಸಮಸ್ಯೆ ಎದುರಾಗಿದೆ ಆದ್ದರಿಂದ ತುರ್ತಾಗಿ ಖಾಸಗಿಯವರಿಂದ ತಾತ್ಕಾಲಿಕವಾಗಿ ಕುಡಿಯುವ ನೀರನ್ನು ಪೂರೈಸಲು ಕ್ರಮ ವಹಿಸಿ ಶಾಶ್ವತವಾಗಿ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸು ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ ಪಿ ಮಲ್ಲೇಶ್ ,ಸದಸ್ಯರಾದ ಯೋಗೇಶ್, ಪುಟ್ಟರಾಜು, ರವಿ,ಪ್ರದೀಪ್, ಶ್ರಿದರ್ ಸೇರಿದಂತೆ ಇನ್ನಿತರರು ಹಾಜರಿದ್ದರು.