ಮುಳಬಾಗಿಲು: ದೆಹಲಿ ಚಲೋ ಹೊರಟಿರುವ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಬರ ನಿರ್ವಹಣೆಗೆ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರೈತ ಸಂಘದಿಂದ ದೇವರಾಯಸಮುದ್ರ ಗ್ರಾಮೀಣ ರಸ್ತೆ ಬಂದ್ ಮಾಡುವ ಮುಖಾಂತರ ಸರ್ಕಾರವನ್ನು ಒತ್ತಾಯಿಸಲಾಯಿತು.
ಅನ್ನದ ಬೆಲೆ ರೈತರ ಕಷ್ಟ ಅರಿವು ಇಲ್ಲದ ಸರ್ಕಾರಗಳಿಗೆ ಪ್ರೊ . ನಂಜುಂಡಸ್ವಾಮಿರವರ ಹೋರಾಟದ ಹಾದಿ ಗ್ರಾಮೀಣ ಪ್ರದೇಶದ ಯುವ ರೈತರಿಂದ ಪ್ರಾರಂಭ ಮಾಡಿ ಚುನಾವಣೆ ಸಮಯದಲ್ಲಿ ಮತ ಕೇಳಲು ಬರುವ ಲೂಟಿ ಕೋರ ಜನಪ್ರತಿನಿದಿಗಳ ವಿರುದ್ದ ಬಾರ್ಕೋಲ್ ಚಳುವಳಿ ಮಾಡುವ ಮೂಲಕ ಮೈ ಚಳಿಯನ್ನು ಬಿಡಸಬೇಕೆಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ ಯುವ ರೈತರಿಗೆ ಸಲಹೆ ನೀಡಿದರು.
30 ದಿನದಲ್ಲಿ ಸಂಬಳ ಬರದೆ ಇದ್ದರೆ ಪರದಾಡುವ ಜನಪ್ರತಿನಿದಿಗಳೇ 365 ದಿನ ನಿರಂತರವಾಗಿ ದುಡಿಯುವ ರೈತರಿಗೆ ನ್ಯಾಯ ಕೊಡಿಸಲು ಮುಂದಾಗದ ಸರ್ಕಾರಗಳಿಗೆ ಮಾನ ಮಾರ್ಯಾದೆ ಇದ್ದರೆ ದೆಹಲಿ ಹೋರಾಟದ ರೈತರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಗಣಿ ವಿಜಯ್ಪಾಲ್ ಮಾತನಾಡಿ ರೈತರ ಒತ್ತಾಯದಂತೆ ಕನಿಷ್ಟ ಬೆಂಬಲ ಬೆಲೆಯನ್ನು ಶಾಸನಬದ್ದಗೊಳಿಸಬೇಕು, ರೈತ ವಿರೋದಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು, ಸ್ವಾಮಿನಾಥನ್ ವರದಿಯನ್ನು ಜಾರಿಗೋಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲದೆ ಸಂಕಷ್ಟದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಜಾನುವಾರುಗಳಿಗೆ ಮೇವು ನೀರಿಲ್ಲದೆ ದುಬಾರಿ ಬೆಲೆ ಕೊಟ್ಟು ಮೇವು ಖರೀದಿಸಲಾಗದೆ ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಇದ್ದು, ಕೂಡಲೇ ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ದೆಹಲಿ ರೈತರ ಬೇಡಿಕೆಗಳನ್ನು ಮಾತುಕತೆ ಮುಖಾಂತರ ಬಗೆಹರಿಸಬೇಕೆಂದು ಒತ್ತಾಯ ಮಾಡಿದರು.
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್, ರಾ.ಕಾ. ಬಂಗಾರಿ ಮಂಜು, ರಾಜೇಶ್, ಸುನಿಲ್ಕುಮಾರ್, ಹೆಬ್ಬಣಿ ಆನಂದ್ರೆಡ್ಡಿ, ನಂಗಲಿ ನಾಗೇಶ್, ದರ್ಮ , ಸುಪ್ರೀಂ ಚಲ,ಭಾಸ್ಕರ್, ಶ್ರೀನಿವಾಸ್, ಮುಂತಾದವರಿದ್ದರು.