ಮಳವಳ್ಳಿ: ಜೀವ ವಿರೋಧಿ ಯುದ್ಧ ಬೇಡ.ಶಾಂತಿ ಸಾಮರಸ್ಯ ನೆಲೆಸಲಿಕ್ಕಾಗಿ ಮಾತುಕತೆ ಮೂಲಕ ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ನಡುವಣ ಸಮಸ್ಯೆ ಇತ್ಯರ್ಥ ಪಡಿಸಲು ವಿಶ್ವ ಸಂಸ್ಥೆ ಮುಂದಾಗಬೇಕು. ಮಹಿಳೆಯರು ಮಕ್ಕಳು ಅಪಾರ ಪ್ರಮಾಣದ , ಆಸ್ತಿ ಪಾಸ್ತಿ ನಷ್ಟ ಉಂಟಾಗುವುದನ್ನು ತಡೆಗಟ್ಟಬೇಕೆಂದು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದರು.
ಅವರು ಮಳವಳ್ಳಿ ಪಟ್ಟಣದ ಪೇಟೆ ಬೀದಿ ಸರ್ಕಲ್ ನಲ್ಲಿ ಯುದ್ಧ ಬೇಡ ಶಾಂತಿ ಬೇಕು. ಜಗತ್ತಿನ ಯಾವುದೇ ಸಮಸ್ಯೆಗಳನ್ನ ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳಲು ವಿಶ್ವ ಸಂಸ್ಥೆ ಮುಂದಾಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನ ಪ್ರದರ್ಶನವನ್ನ ಉದ್ದೇಶಿಸಿ ಮಾತನಾಡುತ್ತಜಗತ್ತಿನಲ್ಲಿ ಶಾಂತಿ ಚಿರಾಯವಾಗಬೇಕು .
ಸಾಮರಸ್ಯ .ಸಹಬಾಳ್ವೆ ಬೆಳೆಯಬೇಕು ಎಂತದೆ ಸಮಸ್ಯೆಗಳ ಬಂದರು ಮಾತು ಕತೆಯೊಂದೆ ಪರಿಹಾರವಾಗಬೇಕೆಂದರು
ಯುದ್ದ ಎಂಬುವುದು ಕ್ರೀಡೆಯಲ್ಲ ಮನೋರಂಜನೆನೂ ಅಲ್ಲ ಅದು ಸಂತೋಷಕ್ಕಾಗಿ ನಡೆಯುವ ಕ್ರಿಯೆಯೂ ಅಲ್ಲ ಯುದ್ಧದಿಂದ ಜೀವ ಮಾನ ಹಾನಿಯಾಗುತ್ತದೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟ ಉಂಟಾಗುತ್ತದೆ ಹಾಗಾಗಿ ಇಸ್ರೇಲ್ ಮತ್ತು ಪ್ಯಾಲಿಸ್ಟೇನ್ ನಡುವಿನ ನಡೆಯುತ್ತಿರುವ ಯುದ್ಧವನ್ನು ತಡೆಗಟ್ಟಲ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು.
ಭಾರತ ಸರ್ಕಾರವು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲು ಒತ್ತಾಯಿಸಿ ಮಾತುಕತೆ ಮುಖಾಂತರ ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಆಗ್ರಹಿಸಬೇಕೆಂದು ಒತ್ತಾಯಿಸಿದರು ಯುದ್ಧ ಎಂಬುದು ಸಾವಿರಾರು ಹೆಣಗಳ ಮೇಲಿ ಕಟ್ಟುವ ಸೌಧವಾಗಿದೆ ಹಾಗಾಗಿ ಮಾನವ ಹಕ್ಕುಗಳು ಎತ್ತಿ ಹಿಡಿಯಬೇಕು.
ಕಳೆದು ಹೋದ ಜೀವವನ್ನ ಮರು ಪಡೆಯಲು ಸಾದ್ಯವೆ ಇ ಜೀವಗಳ ಹಾನಿಗೆ ಯಾರನ್ನ ಹೊಣೆಗಾರರನ್ನಾಗಿ ಮಾಡುವುದು ಎಂದು ಪ್ರಶ್ನಿಸಿದರು. ಪ್ರತಿಭಟನೆ ಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಪ್ರಮೀಳಾ. ಹಿಪ್ಜುಲ್ಲಾ. ಮಹಾದೇವು ಶಿವಕುಮಾರ್ ಮೂರ್ತಿ ಸಿದ್ದರಾಜು ಸತೀಶ್ ಚಿಕ್ಕಸ್ವಾಮಿ ರಘುಸ್ವಾಮಿ ಗಣೇಶ್ ಚಿಕ್ಕೀರಪ್ಪ ಶಿವರಾಜ್ ಮುಂತಾದವರು ಭಾಗವಹಿಸಿದ್ದರು.