ತಿ. ನರಸೀಪುರ: ರೈತರಿಗೆ ಬರ ಪರಿಹಾರ ಹಾಗೂ ಮಳೆಯಿಂದ ಆಗಿರುವ ಬೆಳೆ ನಷ್ಟ ಪರಿಹಾರವನ್ನು ಶೀಘ್ರದಲ್ಲಿ ವಿತರಣೆ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘ ತಾಲೂಕು ಶಾಖೆ ಪ್ರತಿ ಭಟನೆಯ ಮೂಲಕ ಸರ್ಕಾರ ಒತ್ತಾಯಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಮುಂಭಾಗ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಬರಗಾಲದಿಂದ ರೈತರ ಸಂಕಷ್ಟದಲ್ಲಿದ್ದು ಕೃಷಿ ಚಟುವಟಿಕೆ ನಡೆಸಲು ತುಂಬಾ ತೊಂದರೆ ಆಗಿದೆ ಆದರಿಂದ ಬರ ಪರಿಹಾರವನ್ನು ಶೀಘ್ರದಲ್ಲಿ ನೀಡಬೇಕೆಂದು ಒತ್ತಾಯಿಸಿದ್ದರು.
ರಾಜ್ಯ ಸರ್ಕಾರ ಘೋಷಣೆ ಮಾಡಿದ ಕಬ್ಬಿನ ಹೆಚ್ಚುವರಿ ದರ ಟನ್ಗೆ 150 ರೂ ನಿಗದಿ ಮಾಡುವುದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ ಮತ್ತು ತೂಕದಲ್ಲಿ ಮೋಸ ಲಾಭ ಹಂಚಿಕೆಯಲ್ಲಿ ಮೋಸ ಇವುಗಳನ್ನು ಸರಿಪಡಿಸಲು ಆಯುಕ್ತರು ಸೇರಿದಂತೆ ಸಮಿತಿಯನ್ನು ರಚಿಸಲಾಗಿದೆ ಆದ್ದರಿಂದ ಸಮಿತಿ ಕಾರ್ಯಪವೃತ್ತರಾಗಿ ನ್ಯಾಯ ಕೊಡಿಸಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ ಬರ ಪರಿಹಾರ ಜಂಟಿ ಖಾತೆದಾರರು ಬಗರುಉಕ್ಕುಂ ಸಾಗುವಳಿದಾರಿಗೆ ಸಾಗುವಳಿ ರೈತರಿಗೂ ಪರಿಹಾರಸಿಕ್ಕಿಲ್ಲ ಆದರಿಂದ ಕ್ರಮ ಕೈಗೊಳ್ಳಬೇಕು. ಮತ್ತು ಬ್ಯಾಂಕುಗಳ ಮುಂದೆ ರೈತರಿಗೆ ದೊರೆಯುವ ಸಾಲದ ವಿವರಣೆಯನ್ನು ನಾಮಫಲಕದಲ್ಲಿ ಹಾಕಬೇಕು ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ವಸೂಲ್ತಿಗೆ ಗೂಂಡಗಳ ಮೂಲಕ ವಸೂಲಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಎನ್ ಆರ್ ಇ ಜಿ ಕಾಮಗಾರಿ ಕೊಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡಬೇಕು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೂಲಿ ಕಾರ್ಮಿಕರು ರೈತರ ಮಕ್ಕಳಿಂದ ಡೊನೇಷನ್ ವಸೂಲಿ ಮಾಡುತ್ತಿದ್ದು ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದರಿಂದ ಇಂಥ ಸಂಸ್ಥೆಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದರು.ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಂಟಿ ಕಾರ್ಯದರ್ಶಿ ಪರಶಿವಮೂರ್ತಿ, ಪ್ರಸಾದ್ ನಾಯಕ್, ಪ್ರದೀಪ್, ಅಪ್ಪಣ್ಣ, ರಾಜೇಶ್, ಉಮೇಶ್, ನಿಂಗರಾಜು, ರೂಪ ಮುಡುಕನಪುರ, ಕುಮಾರ್ ಬನ್ನೂರು ಸೂರಿ ಇನ್ನೂ ಮುಂತಾದವರು ಹಾಜರಿದ್ದರು.