ಮಾಗಡಿ: ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರ ದಲಿತ ವಿರೋಧ ನೀತಿಯನ್ನು ಖಂಡಿಸಿ ನವೆಂಬರ್ 18 ರಂದು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸ್ವಾಭಿಮಾನಿ ಸೇವಾಸಮಿತಿ ಸಂಸ್ಥಾಪಕ ರಾಜ್ಯಾದ್ಯಕ್ಷ ಗುಡೇಮಾರನಹಳ್ಳಿ ಸಿ.ಚನ್ನಕೇಶವ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು ತಾಲ್ಲೂಕಿನ ಸೋಲೂರು ಹೋಬಳಿ ಗುಡೇಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 131/ಪ,1 ರಲ್ಲಿ 20 ಗುಂಟೆ ಜಮೀನು ಚನ್ನಿಗಪ್ಪ ಬಿನ್ ಚನ್ನಯ್ಯ ಅವರಿಗೆ 1994:95 ರಲ್ಲಿ ದರಖಾಸ್ತು ಮೂಲಕ ಮಂಜೂರಾತಿಯಾಗಿದೆ.
ನಮಗೆ ಮಂಜೂರಾಗಿದ್ದ ಜಮೀನಿನಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ.ರಾಮಯ್ಯ ಎಂಬುವವರು ನಮ್ಮ ಜಮೀನಿನಲ್ಲಿ ಎರಡು ಕೋಳಿ ಶೆಡ್ ನಿರ್ಮಿಸಿಕೊಂಡಿದ್ದು ಉಪ ವಿಭಾಗಾಧಿಕಾರಿಗಳ ಆದೇಶದಂತೆ ನಮಗೆ ಹಸ್ತಾಂತರಿಸುವಂತೆ ತಹಶೀಲ್ದಾರ್ ಸುರೇಂದ್ರಮೂರ್ತಿ ಅವರಿಗೆ ಕ್ಷೇತ್ರದ ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಸೂಚಿಸಿದ್ದರು.
ಆದರೆ ತಹಶೀಲ್ದಾರ್ ಅವರು ನಾನಾ ರೀತಿಯ ರೀತಿಯ ಸಬೂಬು ನೀಡಿ,ನಮಗೆ ಮಂಜೂರಾಗಿರುವ ಜಮೀನಿಗೆ ಮೂರು ಭಾರಿ ಸ್ಕೆಚ್ ನಕ್ಷೆ ಮಾಡಿಸಿ ಒಂದೊಂದು ಭಾರಿ ಒಂದೊಂದು ರೀತಿಯಲ್ಲಿ ಚಕ್ಕುಬಂದಿ ಬದಲಾವಣೆ ಮಾಡಿ ದಲಿತರಾದ ನಾವುಗಳು ಅನುಭವದಲ್ಲಿರುವ ಜಮೀನಿನಲ್ಲಿ ನಮ್ಮ ಜಮೀನು ಇರುವುದಾಗಿ ನಕ್ಷೆ ಚಕ್ಕುಬಂದಿ ತಯಾರಿಸಿ ದಲಿತರೊಂದಿಗೆ ದಲಿತರೇ ದಲಿತರೇ ಹೊಡೆದಾಡುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಹರಿಹಾಯ್ದರು.
ನಮ್ಮ ತಂದೆಯವರಾದ ಚನ್ನಿಗಯ್ಯ ಬಿನ್ ಚನ್ನಯ್ಯ ಅವರಿಗೆ ಸರಕಾರದಿಂದ ಮಂಜೂರಾತಿಯಾಗಿರುವ ಸಾಗುವಳಿ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿದ್ದು ಸರಕಾರದ ಆದೇಶವನ್ನು ತಾಲ್ಲೂಕು ಆಡಳಿತ ಧಿಕ್ಕರಿಸುವ ಕೆಲಸವನ್ನು ಮಾಡುತ್ತಿದೆ.ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ಸೂಚನೆಗೂ ಬೆಲೆ ನೀಡದ ತಹಶೀಲ್ದಾರ್ ಅವರ ವಿರುದ್ದವಾಗಿ ನವೆಂಬರ್ 18 ರಂದು ಬೆಳಗ್ಗೆ 10 ಗಂಟೆಗೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸುತಿದ್ದು ನಮಗೆ ನ್ಯಾಯ ಸಿಗದಿದ್ದರೆ ಮಾಗಡಿಯಿಂದ ಕಾಲ್ನಡಿಗೆ ಅರೆಬೆತ್ತಲೆ ಮೆರವಣಿಗೆ ಮೂಲಕ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರ ಮನೆ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಚನ್ನಕೇಶವ ಎಚ್ವರಿಕೆ ನೀಡಿದರು.
ರಾಜ್ಯ ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ರಾಮನಹಳ್ಳಿ ಮಂಜೇಶ್, ತಾಪಂ ಮಾಜಿ ಅದ್ಯಕ್ಷ ನಾಗರಾಜು, ದಲಿತ ಮುಖಂಡರಾದ ಶಿವಶಂಕರ್, ಚನ್ನಯ್ಯ, ಮಾಡಬಾಳ್ ಆನಂದ್, ಬಿಬಿಜೆ ಗೋಪಾಲ್, ನರಸಿಂಹಮೂರ್ತಿ, ಜೀವಿಕ ಗಂಗಹನುಮಯ್ಯ, ತೊರೆರಾಮನಹಳ್ಳಿ ನರಸಿಂಹಮೂರ್ತಿ, ರಾಮಣ್ಣ,ಉಮೇಶ್ ಸೇರಿದಂತೆ ಮತ್ತಿತರಿದ್ದರು.