ಕನಕಪುರ: ಕಾನೂನು ಬಾಹಿರವಾಗಿ ಭ್ರೂಣಪತ್ತೆ ಹಾಗೂ ಹತ್ಯೆ ಆರೋಪಿ ಡಾ.ದಾಕ್ಷಾಯಿಣಿಯವರನ್ನು ರಕ್ಷಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ನಗರದ ತಾಯಿ ಹಾಗೂ ಮಗು ಆಸ್ಪತ್ರೆಯ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಭ್ರೂಣ ಪತ್ತೆ ಹಾಗೂ ಹತ್ಯೆಯ ಆರೋಪಿ ಡಾ.ದಾಕ್ಷಾಯಿಣಿ ಭ್ರೂಣ ಪತ್ತೆ ಯಂತ್ರವನ್ನು ದುರುಪಯೋಗ ಮಾಡಿಕೊಂಡ ಪ್ರಕರಣವನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಬಂದು ದಾಕ್ಷಾಯಿಣಿ ಅವರಿಗೆ ನೋಟೀಸ್ ನ್ನು ಜಾರಿಗೊಳಿಸಿ ಕೈ ತೊಳೆದು ಕೊಂಡಿದ್ದು ಅವರ ವಿರುದ್ಧ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ತನಿಖೆಯನ್ನು ಬಹಿರಂಗಗೊಳಿಸಿದೆ ಹಾಗೂ ಆರೋಪಿ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು ಸಂಚು ನಡೆಯುತ್ತಿರುವ ಅನುಮಾನ ಇರುವುದಾಗಿ ಶಂಕೆ ವ್ಯಕ್ತಪಡಿಸಿದರು.
ಈವರೆಗೆ ಇಲಾಖಾ ತನಿಖೆಯಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇದ್ದು ಪ್ರಕರಣ ಹಾದಿ ತಪ್ಪುತ್ತಿದ್ದು ಸರ್ಕಾರ ಗಂಭೀರವಾದ ಈ ಪ್ರಕರಣವನ್ನು ಕೂಡಲೇ ಸಿ.ಓ.ಡಿ ಗೆ ವಹಿಸಿ ಆರೋಪಿಯನ್ನು ಈ ಕೂಡಲೇ ಸೇವೆ ಯಿಂದ ಅಮಾನತು ಮಾಡುವಂತೆ ಆಗ್ರಹಿಸಿದರು.
ಆರೋಪ : ಆಸ್ಪತ್ರೆಯಲ್ಲಿ ಈ ವೈದ್ಯೆಯಿಂದ ಕಿರುಕುಳ ಅನುಭವಿಸಿದ ಸಾರ್ವಜನಿಕರ ಪರವಾಗಿ ನಾವುಗಳು ಹೋರಾಟ ಮಾಡುತ್ತಿದ್ದರೆ ಕಳಂಕಿತ ವೈದ್ಯೆ ನಮ್ಮ ವಿರುದ್ಧ ಸತ್ಯಕ್ಕೆ ದೂರವಾದ ಗಾಳಿ ಸುದ್ದಿಗಳನ್ನು ಹರಡಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು.
ಹಾಸ್ಯಾಸ್ಪದವಾಗಿದ್ದು ಆರೋಪಿ ವೈದ್ಯೆ ಭ್ರೂಣ ಹತ್ಯೆಗಳ ಪಾಪದ ಹಣದಿಂದ ಅಕ್ರಮ ಆಸ್ತಿ ಗಳಿಕೆಯ ಸಂಪೂರ್ಣ ಮಾಹಿತಿ ನಮ್ಮ ಬಳಿಯಿದ್ದು ಅದನ್ನು ತನಿಖಾಧಿಕಾರಿಗಳಿಗೆ ನೀಡುವುದಾಗಿ ಎಚ್ಚರಿಸಿದರು.ಕರುನಾಡ ಸೇನೆ ಜಗದೀಶ್, ಶ್ರೀ ರಾಮ ಸೇನೆ ಜಿಲ್ಲಾ ಅಧ್ಯಕ್ಷ ನಾಗಾರ್ಜುನ,ಪ್ರಶಾಂತ್,ಅಸ್ಗರ್ ರೈತ ಮುಖಂಡ ಚೀಲೂರು ಮುನಿರಾಜು, ಕೆಬ್ಬಳ್ಳಿ ಶಿವರಾಜು, ನಲ್ಲಹಳ್ಳಿ ಶ್ರೀನಿವಾಸ, ಪುಟ್ಟಲಿಂಗಯ್ಯ,ನಗರಸಭಾ ಸದಸ್ಯ ಚಂದ್ರು, ಕನ್ನಡ ಪರ ಹೋರಾಟಗಾರ ಭಾಸ್ಕರ್, ಕೆ.ಆರ್.ಸುರೇಶ್, ವಕೀಲ ಜಯರಾಂ, ವರಲಕ್ಷ್ಮಿ, ಸೇರಿದಂತೆ ಹಲವಾರು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.