This is the title of the web page
This is the title of the web page

ಕೆಪಿಟಿಸಿಎಲ್ ಕಚೇರಿ ಮುಂದೆ ಪ್ರತಿಭಟನೆ

ಮಳವಳ್ಳಿ: ರೈತರ ಪಂಪ್ ಸೆಟ್‍ಗಳಿಗೆ ಸಮರ್ಪಕವಾಗಿ ಟಿಸಿ ಅಳವಡಿಸದಿರುವ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮಳವಳ್ಳಿ ಕೆಪಿಟಿಸಿಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕಿನ ಬಿಜಿಪುರ ಹೋಬಳಿಯ ದ್ಯಾವಪಟ್ಟಣ ಗ್ರಾಮದ ರೈತರ ಪಂಪ್ಸೆಟ್‍ಗಳಿಗೆ ಅಳವಡಿಸಿದ್ದ ಟ್ರಾನ್ಸ್ಫಾರ್ಮರ್ ಕೆಟ್ಟು ಹೋಗಿ 15 ದಿನಗಳಾಗಿದ್ದು, ಈ ಬಗ್ಗೆ ಸಂಬಂಧಿಸಿದ ಬೆಳಕವಾಡಿ ಕಿರಿಯ ಅಭಿಯಂತರರಿಗೆ ಹಾಗೂ ಮಳವಳ್ಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದ್ದರು.

ಟಿಸಿ ಅಳವಡಿಸದಿರುವುದರಿಂದ ರೈತರ ಬೆಳೆ ಒಣಗಿ ಹಾಳಾಗಿ ಹೋಗಿದ್ದು, ರೈತರಿಗೆ ಹತ್ತಾರು ಸಾವಿರ ರೂಗಳ ನಷ್ಟ ಸಂಭವಿಸಿರತ್ತದೆ. ರೈತ ವಿರೋಧಿ ನೀತಿಯನ್ನ ವಿರೋಧಿಸಿ ಮಳವಳ್ಳಿ ಸಹಾಯಕ ಕಾರ್ಯ ಪಾಲಕ ಅಭಿಯಂತರವರ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘಟನೆ ಪ್ರತಿಭಟನೆಯನ್ನು ನಡೆಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳಲಾಯಿತು.

ಸ್ಥಳಕ್ಕೆ ಬಂದ ಅಧಿಕಾರಿಗಳು ಇಂದೆನೆ ಟ್ರಾನ್ಸ್ಫಾರ್ಮರ್ ಅಳವಡಿಸುವುದಾಗಿ ಭರವಸೆ ನೀಡಿದರೂ ಟಿಸಿ ಅಳವಡಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಪ್ರತಿಭಟನಾಕಾರರು ಪಟ್ಟು ಹಿಡಿದರು ನಂತರ ಟ್ರಾನ್ಸ್ಫಾರ್ಮರ್ ಅಳವಡಿಸಿದ ಮಾಹಿತಿಯನ್ನ ರೈತರು ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು ಈ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರಾದ ಎನ್ ಎಲ್ ಭರತರಾಜ್ ಕಾರ್ಯದರ್ಶಿ ಏನ್ ಲಿಂಗರಾಜ ಮೂರ್ತಿ ಉಪಾಧ್ಯಕ್ಷರಾದ ಗುರುಸ್ವಾಮಿ ಎಲ್ ಶಿವಕುಮಾರ್ ಮಹದೇವು ದ್ಯಾವಪಟ್ಟಣ ಮರಿಲಿಂಗೇಗೌಡ ಸತೀಶ್ ತಿಮ್ಮೇಗೌಡ ಶಿವಮಲ್ಲು ಮುಂತಾದವರು ಭಾಗವಹಿಸಿದ್ದರು.