ಕೆ.ಆರ್.ನಗರ: ಬೆಳಿಗ್ಗೆ 10: ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕು ಟ್ರಾನ್ಸ್ ಪಾರ್ಮ್ ಕೆಟ್ಟ 72 ಗಂಟೆಯೊಳಗೆ ಹೊಸ ಟ್ರಾನ್ಸ್ ಫಾರ್ಮ್ ಹಾಕಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ತಾಲೂಕ್ ರೈತ ಸಂಘದ ವತಿಯಿಂದ ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಂತರ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಹೊಸದಾಗಿ ಆರ್ ಆರ್ ಸಂಖ್ಯೆ ಪಡೆಯಲು ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯ ನೀಡುತ್ತಿಲ್ಲ ಗ್ರಾಹಕರ ಕೈಪಿಡಿಯಂತೆ ಸೆಸ್ಕಾಂ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿಲ್ಲ ಮೂರು ತಿಂಗಳಿಗೊಮ್ಮೆ ರೈತರ ಸಭೆಯನ್ನು ಕರೆಯಬೇಕೆಂಬ ನಿಯಮವಿದ್ದರೂ ಕರೆಯುತ್ತಿಲ್ಲ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಗೆ ಧಿಕ್ಕಾರ ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರ್ಕಾರದ ಆದೇಶವನ್ನು ಗಾಳಿಗೆ ತೂರಿರುವ ಅಧಿಕಾರಿಗಳು ಮನಸ ಇಚ್ಛೆ ತ್ರೀ ಫೇಸ್ ವಿದ್ಯುತ್ತನ್ನು ತೆಗೆಯುತ್ತಿದ್ದು, ರೈತರ ಪಂಪಸಟ್ಟುಗಳಲ್ಲಿ ವಿದ್ಯುತ್ ಅಭಾವದಿಂದ ನೀರನ್ನು ಬೆಳೆಗೆ ಹಾಯಿಸಲಾಗದೆ ರೈತ ಕಂಗಾಲಾಗಿದ್ದು ಬೆಳೆ ಬೆಳೆಯಲಾಗದೆ ಸಾಲಗಾರನಾಗುವ ಸ್ಥಿತಿ ಒದಗಿ ಬಂದಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸುನಿಲ್ ಕುಮಾರ್ ಹಾಗೂ ತಹಸಿಲ್ದಾರ್ ಸಿ ಎಸ್ ಪೂರ್ಣಿಮಾ ರವರಿಗೆ ಮನವಿ ಪತ್ರ ನೀಡಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ಎಲ್ಲಾ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಮನವಿಯನ್ನು ಸ್ವೀಕರಿಸಿದ ತಹಸಿಲ್ದಾರ್ ಸಿ ಎಸ್ ಪೂರ್ಣಿಮಾ ಮತ್ತು ಅಧೀಕ್ಷಕ ಇಂಜಿನಿಯರ್ ಸುನಿಲ್ ಕುಮಾರ್ ಈ ಮನವಿಯನ್ನು ಮೇಲಧಿಕಾರಿಗಳಿಗೆ ಕಳಿಸುವ ಜೊತೆಗೆ ರೈತರ ಸಮಸ್ಯೆಯನ್ನು ಮೇಲಧಿಕಾರಿಗಳ ಅನುಮತಿ ಪಡೆದು ಬಗೆಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳಾದ ಅಶೋಕ್ ಶಿವಣ್ಣ ಜಿತೇಂದ್ರ ವಿಶ್ವಾಸ್ ರಮೇಶ್ ಮಂಜುನಾಥ್ ವಿಷ್ಣುವರ್ಧನ್ ದೇವರಾಜ್ ನಾಗೇಶ ಕಾಳೇಗೌಡ ಚಂದ್ರು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.