ಕಲಬುರಗಿ :ಇಂದು ರಾಜ್ಯಾದ್ಯAತ ಸಂಭ್ರಮದಿAದ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಕಲಬುರಗಿಯಲ್ಲಿ ಪ್ರತ್ಯೇಕರಾಜ್ಯದ ಕೂಗು ಮೊಳಗಿದೆ. ರಾಜ್ಯೋತ್ಸವದ ದಿನ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಕಲಬುರಗಿಯಜಗತ್ ವೃತ್ತದಲ್ಲಿ ಹೋರಾಟಗಾರರು ಧರಣಿ ನಡೆಸಿದ್ದಾರೆ. ಈ ವೇಳೆ ಪ್ರತ್ಯೇಕ ಧ್ವಜಾರೋಹಣಕ್ಕೆ ಹೋರಾಟಗಾರರು ಮುಂದಾಗಿದ್ದಾರೆ. ೨೦ ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



