ದೊಡ್ಡಬಳ್ಳಾಪುರ: ರಾಮನಗರದ ಐಜೂರು ಪೊಲಿಸ್ ಠಾಣೆಯಲ್ಲಿ ವಕೀಲರ ಮೇಲೆ ದಾಖಲಿಸಲಾದ ಎಫ್ ಐಆರ್ ನ್ನು ಖಂಡಿಸಿ ಸೋಮವಾರ ನಗರದಲ್ಲಿನ ಸಿವಿಲ್ ಕೋರ್ಟ್ ಆವರಣದಲ್ಲಿ ಕಲಾಪ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣ ಮೂರ್ತಿ ಅವರು ಉದ್ದೇಶಪೂರ್ವಕವಾಗಿ 40 ವಕೀಲರ ಮೇಲೆ ದೂರು ದಾಖಲಿಸಿದ ಸಬ್ ಇನ್ಸ್ಪೆಕ್ಟರ್ ರನ್ನು ಅಮಾನತುಗೊಳಿಸಬೇಕು ವಕೀಲರಿಗೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯಿಸಿದರು. ನ್ಯಾಯಾವಾದಿ ಗಳಿಗೆ ಯಾವುದೇ ಧರ್ಮವಿಲ್ಲ, ನಮಗೆ ನಮ್ಮ ಕಕ್ಷಿದಾರ ನಿಗೆ ನ್ಯಾಯ ಒದಗಿಸುವುದೇ ಧರ್ಮ ಎಂದು ಹಿರಿಯ ವಕೀಲ ರುದ್ರಾರಾಧ್ಯ ಅವರು ಹೇಳಿದರು.
ರಾಮನಗರದ ಐಜೂರು ಪೊಲೀಸ್ ಇನ್ಸ್ಪೆಕ್ಟರ್ ವಿನಾಕಾರಣ ವಕೀಲರ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಕೂಡಲೇ ರದ್ದು ಮಾಡಬೇಕು ಎಂದು ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಕೋರ್ಟ್ ಕಲಾಪ ಬಹಿಷ್ಕಾರ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಕೀಲರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ ಮಾತನಾಡಿ ವಕೀಲರ ರಕ್ಷಣಾ ಕಾಯ್ದೆ ಜಾರಿ ಯಾದರೂ ವಕೀಲರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ, ಪೊಲೀಸರು 40 ಜನ ವಕೀಲರ ಮೇಲೆ ಎಫ್ಐಆರ್ ದಾಖಲು ಮಾಡಿದೆ, ಪೊಲೀಸರ ಈ ನಿಲುವನ್ನು ಖಂಡಿಸಿ ರಾಜ್ಯದಾದ್ಯಂತ 190 ತಾಲ್ಲೂಕುಗಳ ವಕೀಲರ ಸಂಘಗಳು ಇಂದು ಕೋರ್ಟ್ ಕಲಾಪಗಳನ್ನು ಬಹಿಷ್ಕಾರ ಮಾಡಿ ರಾಮನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಆರ್. ಸುರೇಶ್, ನಿರ್ದೇಶಕರು ಗಳಾದ ಆರ್.ಪ್ರಭಾಕರ್. ಎನ್.ಲೀಲಾವತಿ ನಾಝಿಮ್, ಮಮ್ತಾಜ್ ಅನಿತ, ಶಿವಣ್ಣ, ಚಂದೇಶ್, ಮೋಹನ್ ಕುಮಾರ್, ಪ್ರವೀಣ್ ಕುಮಾರ್ ಗುಪ್ತಾ, ಉಮೇಶ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.