ಬೇಲೂರು: ಬಿಕ್ಕೋಡು ಹೋಬಳಿಯಲ್ಲಿ ಸಬ್ ಸ್ಟೇಷನ್ ಮಾಡಿಕೊಡಿ ಎಂದು ಪಟ್ಟಣದ ಕೆಇಬಿ ಮುಂಭಾಗ ಏಕಾಂಗಿ ಹೋರಾಟಗಾರ ತೀರ್ಥಪ್ಪ ಪ್ರತಿಭಟನೆ ನಡೆಸಿದರು.ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಸಬ್ ಸ್ಟೇಷನ್ ಗೆ ಶಂಕುಸ್ಥಾಪನೆ ಮಾತ್ರ ಆಗಿದ್ದು ಇದುವರೆಗೂ ಕೂಡ ಸಬ್ಸ್ಟೇಷನ್ ಆಗಿಲ್ಲ.
ಬಿಕ್ಕೋಡು ಕಡೆ ಯಾವಾಗಲೂ ವಿದ್ಯುತ್ ಇರುವುದಿಲ್ಲ ಆನೆಗಳ ಕಾಟ ಬೇರೆ ಹೆಚ್ಚಾಗಿದೆ.ಇದರ ಬಗ್ಗೆ ವಿದ್ಯುತ್ ಕಾರ್ಯಪಾಲಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಈಗಿನ ಶಾಸಕರೂ ಕೂಡ ಕೇವಲ ಆಶ್ವಾಸನೆ ನೀಡುತ್ತಾರೆ ಹೊರತು ಯಾವುದೇ ಕೆಲಸ ಜಾರ್ಯಗಳನ್ನು ಮಾಡುತ್ತಿಲ್ಲ.
ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿಯ ಜೆಯಿಯವರೂ ಕೂಡ ಕೆಲಸ ಮಾಡುತ್ತಿಲ್ಲ.ಟಿಸಿ ಕೆಟ್ಟುಹೋದರೆ 10 ಸಾವಿರೂ ಕೇಳುತ್ತಾರೆ. ಮೇಲಿನ ಅಧಿಕಾರಿಗಳಿಗೆ ಇದರ ಬಗ್ಗೆ ವಿಚಾರಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಇದರಿಂದ ಈ ಭಾಗದ ರೈತರಿಗೆ ಬಹಳಷ್ಟು ತೊಂದರೆಯಾಗಿದೆ.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿಕೆ ಶಿವಕುಮಾರ್ ಇಂಧನ ಸಚಿವರಾದಾಗ ಬಿಕ್ಕೋಡಿನಲ್ಲಿ ಸಭ್ ಸ್ಟೇಷನ್ ಗೆ ಶಂಕು ಸ್ಥಾಪನೆ ನೆರೆವೇರಿಸಿ, ಅತಿ ಶೀಘ್ರದಲ್ಲಿ ಸಬ್ ಸ್ಟೇಷನ್ ನ ಕಾಮಗಾರಿಗಳನ್ನು ಮುಗಿಸಿ ಈ ಭಾಗದ ನಿವಾಸಿಗಳಿಗೆ ಉತ್ತಮವಾದ ನಿರಂತರ ವಿದ್ಯುತ್ ನೀಡಲಾಗುವುದು ಎಂದಿದ್ದರು.
ಆದರೆ ಶಂಕುಸ್ಥಾಪನೆಯಾದ ಸಭ್ ಸ್ಟೇಷನ್ ಅಲ್ಲಿಗೆ ಸಮಾಪ್ತಿಯಾಗಿದೆ ಎಂದರಲ್ಲದೆ ಕೂಡಲೇ ಸಂಬಂಧದ ಪಟ್ಟ ಅಧಿಕಾರಿಗಳು ಗಮನ ಹರಿಸಿ ಈ ಬಿಕ್ಕೋಡು ಹೋಬಳಿಯಲ್ಲಿ ಸಬ್ ಸ್ಟೇಷನ್ ಆದಷ್ಟು ಬೇಗ ಮಾಡಿಸಿಕೊಡಿ. ಹಾಗೆಯೇ ಕೆರೆ ಒತ್ರುವರಿ,ಗ್ರಾಮಠಾಣಾ ಒತ್ತುವರಿ ಸಾಕಷ್ಟು ಆಗಿದ್ದರೂ ಇದರ ಬಗ್ಗೆ ಶಾಸಕರು ಹಾಗೂ ಯಾವ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ ಕೂಡಲೇ ಇವೆಲ್ಲದರ ಬಗ್ಗೆ ಗಮನ ಹರಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.