ಹೊಸಕೋಟೆ: ಲಯನ್ ಸಂಸ್ಥೆಯ 317ರ ಜಿಲ್ಲಾ ಪ್ರಾಂತೀಯ ಸಮ್ಮೇಳನ ಬೆಂಗಳೂರಿನ ಆರ್ ಜಿ ರಾಯಲ್ ಹೋಟೆಲ್‍ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಧುಮೇಹ ತಜ್ಞರಾದ ಡಾ: ಪಲ್ಲವಿ ದುಬೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ: ಸಿ.ಸೋಮಶೇಖರ್ ಆಗಮಿಸಿದ್ದರು. ಪ್ರಾಂತ 1ರಅಧ್ಯಕ್ಷ ಠಾಕೂರ್ ಅಮರೇಂದ್ರ ಸಿಂಗ್ ಅಧ್ಯಕ್ಷತೆ ವಹಿಸಿದ್ದರು.
ನಾಡಿಗಾಗಿ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಮಹನೀಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಬಡ 20 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ಸಹಾಯಧನ ನೀಡಲಾಯಿತು. ಲಯನ್ಸ್ ಸಂಸ್ಥೆಯ ಜಿಲ್ಲಾ ಗೌರ್ನರ್ ರಾಜಶೇಖರಯ್ಯ, ವಲಯ ಅಧ್ಯಕ್ಷರಾದ ಮಹೇಂದ್ರ ಸಿಂಗ್, ಜಿ.ಎಸ್. ಮಂಜುನಾಥ್, ಡಾ: ಶೋಭಾ ಮುಂತಾದವರು ಉಪಸ್ಥಿತರಿದ್ದರು.
Leave a Review