ದಾವಣಗೆರೆ: ಪ್ರತಿಯೊಬ್ಬರ ಆಲೋಚನೆಗಳಲ್ಲಿ ದಿನಕ್ಕೆ 40 ರಿಂದ 80 ಸಾವಿರದವರೆಗೆ ಆಲೋಚನೆಗಳು ಮನಸಿನಲ್ಲಿ ಮೂಡಲಿದ್ದು ಇದರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಆಯ್ದುಕೊಂಡಾಗ ಮಾತ್ರ ದಿನದ ಬದುಕಿನಲ್ಲಿ ಒತ್ತಡ ಮುಕ್ತರಾಗಿ ಲವಲಿಕೆಯಿಂದ ಇರಬಹುದೆಂದು ಮನೋಶಾಸ್ತ್ರಜ್ಞ ಡಾ; ಸುಭಾಷ್ ಚಂದ್ರನ್ ತಿಳಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಾರ್ಯ ಒತ್ತಡ ನಿರ್ವಹಣೆ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಪೊಲೀಸ್ ಕರ್ತವ್ಯದ ಸಮಯದಲ್ಲಿ ಹಾಗೂ ವೈಯುಕ್ತಿಕ ಜೀವನದಲ್ಲಿ ಹೇಗೆ ಕಾರ್ಯ ಒತ್ತಡ ನಿರ್ವಹಣೆ ಮಾಡುವ ಬಗ್ಗೆ ಉಪನ್ಯಾಸ ನೀಡಿದರು.
ಮನುಷ್ಯನಿಗೆ ಮಲಗಿ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ಅನೇಕ ಚಿಂತನೆಗಳು ಬರಲಿವೆ. ಇದರಲ್ಲಿ ಕರ್ತವ್ಯದ ಸ್ಥಳ ಇರಬಹುದ, ಕುಟುಂಬದ ಮತ್ತು ನೆರೆಹೊರೆಯವರ ಹಾಗೂ ಸಂಬಂಧಿಕರ ಬಗ್ಗೆ ಆಲೋಚಗಳು ಮೂಡುತ್ತವೆ. ಇವುಗಳಲ್ಲಿ ಕೆಲವು ಭಾವನಾತ್ಮಕ, ಕೆಲವು ಸಂತೋಷ, ದುಖಃ, ಕರುಣೆ, ಪ್ರೀತಿ, ಭಕ್ತಿ ಸೇರಿದಂತೆ ಅನೇಕ ಭಾವವಿಕಾರಗಳು ಮೂಡಲಿವೆ. ಆದರೆ ಇವುಗಳಲ್ಲಿ ಯಾವು ಸಕಾರಾತ್ಮಕವೋ ಅಂತಹ ಆಲೋಚನೆಗಳನ್ನು ಮಾತ್ರ ಪರಿಗಣಿಸಿ ನಕಾರಾತ್ಮಕ ಚಿಂತನೆಗಳನ್ನು ಕೈಬಿಡಬೇಕು. ಕೆಲವು ಸಂದರ್ಭದಲ್ಲಿ ಮಕ್ಕಳ ಬಗ್ಗೆ ಚಿಂತನೆ ಮಾಡಿ ಇತರೆಯವರಿಗೆ ಹೋಲಿಕೆ ಮಾಡುವುದುಂಟು, ಆದರೆ ಸಾಮಥ್ರ್ಯವನ್ನು ಹೆಚ್ಚಿಸಲು ಪ್ರಯತ್ನಪಡುವ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಆಲೋಚನೆ ಬಹಳ ಮುಖ್ಯವಾಗಿರುತ್ತದೆ ಎಂದರು.
ಒತ್ತಡಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಒತ್ತಡಗಳನ್ನು ತಲೆಬಾರವಾಗಿ ತೆಗೆದುಕೊಳ್ಳದೇ ಎಲ್ಲಾ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ಷ್ಮತೆಯಿಂದ ನಿರ್ವಹಣೆ ಮಾಡಿದಾಗ ಒತ್ತಡದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಒಟ್ಟಾರೆ ಸಕಾರಾತ್ಮಕ ಚಿಂತನೆಗಳು ಒತ್ತಡದ ಬದುಕಿನಿಂದ ಹೊರಬರಲು ಸಹಕಾರಿಯಾಗಲಿದೆ ಎಂದರು.
ಕಾರ್ಯಗಾರದಲ್ಲಿ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅಧ್ಯಕ್ಷತೆ ವಹಿಸಿ, ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಪ್ರತಿಜ್ಞಾ ವಿಧಿ ಭೋಧಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ ಮಾತನಾಡಿ ಪೆÇಲೀಸ್ ಕರ್ತವ್ಯದ ಸಮಯದಲ್ಲಿ ಹಲವಾರು ಒತ್ತಡಗಳಲ್ಲಿ ಅಂದರೆ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಒತ್ತಡಗಳಲ್ಲಿ ಕಾರ್ಯರ್ವಹಿಸಬೇಕಾಗಿರುತ್ತದೆ. ಜೊತೆಗೆ ವೈಯುಕ್ತಿಕ ಜೀವನವೂ ಕೂಡ ಬಹು ಮುಖ್ಯ ವಾಗಿರುತ್ತದೆ,
ಇಂತಹ ಸಮಯದಲ್ಲಿ ಜೀವನ ಸಮತೋಲನವಾಗಿರಿಸಿಕೊಳ್ಳಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಮಂದಿಗಳಿಗೆ ಅನುಕೂಲವಾಗಲೇಂದು ಈ ಕಾರ್ಯಗಾರವನ್ನು ಏರ್ಪಡಿಸಿದ್ದು ಕಾರ್ಯಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಮಂಜುನಾಥ್, ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪ್ರಶಾಂತ್ ಸಿದ್ದನಗೌಡರ್, ಉಜ್ಜನಿಕೊಪ್ಪ, ಬೆರಳು ಮುದ್ರೆ ಘಟಕದ ರುದ್ರೇಶ್ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮೆಹಬೂಬ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.