ದೇವನಹಳ್ಳಿ: ತಾಲೂಕಿನ ಕಸಬಾ ಹೋಬಳಿ ವುಡ್ರಿಚ್ ಬಳಿ ಅಣಿಘಟ್ಟ ಗ್ರಾಮದ ಸರ್ವೆ ನಂ.44 ರಲ್ಲಿ 1.8 ಗುಂಟೆಜಮೀನಿಗೆ ಸಂಬಂಧಿಸಿದಂತೆ, ಈ ಹಿಂದೆ ಸರಕಾರದಿಂದ ಪರಿಶಿಷ್ಠ ಜಾತಿ ರೈತನಿಗೆ ಮಂಜೂರಿಯಾಗಿದ್ದ 1 ಎಕರೆ 8 ಗುಂಟೆ ಜಮೀನನ್ನು ಮಂಜೂರಿದಾರರಿಂದ ಕಾನೂನು ಬಾಹಿರವಾಗಿ ಬಲಾಡ್ಯರು ಭೂಮಿ ಕಬಳಿಸಿ ಬಡಾವಣೆ ಮಾಡಲು ಉದ್ದೇಶಿಸಿದ್ದರು, ಪಿಟಿಸಿಎಲ್ ಪ್ರಕರಣ ಸಂಖ್ಯೆ ಎಸ್.ಆರ್./ದೇ/48/2009-10ರಂತೆ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶದಿಂದ 1.8 ಎಕರೆ ಜಮೀನನ್ನು ಸರ್ವೆ ಕಾರ್ಯ ನಡೆಸಿ ಕಂದಾಯ ಇಲಾಖೆ ಸಿಬ್ಬಂದಿ ಮಂಜೂರಿದಾರನಿಗೆ ಜಮೀನು ಬಿಡಿಸಿ ಕೊಟ್ಟಿದ್ದಾರೆ.
ಪಿಟಿಸಿಎಲ್ ಭೂಮಿ ವಂಚಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಮಾತನಾಡಿ, ಇಡೀ ರಾಜ್ಯದಲ್ಲಿ ಬಲಾಢ್ಯರೇ ಭೂಮಿ ಕಿತ್ತುಕೊಂಡು ದಲಿತರಿಗೆ ಮೋಸ ಮಾಡುತ್ತಿದ್ದರು, ಈ ಕುರಿತು ರಾಜ್ಯ ಸರಕಾರದ ವಿರುದ್ಧವಾಗಿ ಮತ್ತು ಈ ಹಿಂದಿನ ಬಿಜೆಪಿ ಸರಕಾರದ ವಿರುದ್ಧವಾಗಿಯೂ ಸಹ ನಾಲ್ಕು ವರ್ಷದಿಂದ ನಿರಂತರ ಹೋರಾಟ ಮಾಡಿಕೊಂಡು ಬರಲಾಗಿತ್ತು, ಕಳೆದ ಬಾರಿ ಫ್ರೀಡಂ ಪಾರ್ಕ್ನಲ್ಲಿ 208 ದಿನ ಸತ್ಯಾಗ್ರಹವನ್ನು ಮಾಡುತ್ತಿದ್ದರೂ,
ಹಿಂದಿನ ಬಿಜೆಪಿ ಸರಕಾರ ಏನು ಮಾಡದೆ ಸುಮ್ಮನೆ ಕುಳಿತಿತ್ತು, ಈಗಿನ ಕಾಂಗ್ರೆಸ್ ಸರಕಾರ ನಮ್ಮ ಬೇಡಿಕೆಯಾಗಿದ್ದ ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲವೆಂಬುವುದನ್ನು ಹೊಸ ಅಮೆಂಡ್ಮೆಂಟ್ ಮಾಡಿ, ನಮ್ಮ ಬೇಡಿಕೆ ಈಡೇರಿಸಿಕೊಟ್ಟರು, ಆದಾದ ನಂತರ ಪಿಟಿಸಿಎಲ್ ಕಾಯ್ದೆಯಡಿ ಕಾನೂನು ಬಾಹಿರ ಭೂ ಕಬಳಿಕೆಯ ದಾವೆಗಳನ್ನು ಹಾಕಿ ಮಂಜೂರಿದಾರ ನರಸುಮ ಉರುಪ್ ನರಸಿಂಹಯ್ಯ ಬಿನ್ ಲೇ|| ಮುನಿಮಲ್ಲಪ್ಪ ಹೆಸರಿಗೆ ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಬಿಡಿಸಿಕೊಡಲಾಗಿದೆ ಇದು ನಮ್ಮ ಸಮಿತಿಯ ಹೋರಾಟದ ಫಲ ಎಂದರು.
ಇದೇ ವೇಳೆ ವುಡ್ ರಿಚ್ ರೆಸಾರ್ಟ್ನ ವ್ಯಾಪ್ತಿಯಒಳಗೆ ಸೇರಿದ್ದ ಈ ಜಮೀನಿಗೆ ಭೂಮಿ ವಂಚಿತರ ಹೋರಾಟ ಸಮಿತಿ ವತಿಯಿಂದ ಪಿಟಿಸಿಎಲ್ ಕಾಯ್ದೆ ಮೂಲಕ ಜಮೀನು ಬಿಡಿಸಿ ಸಮಿತಿಯಿಂದ ನಾಮಫಲಕವನ್ನು ಅಳವಡಿಸಲಾಯಿತು.ಇದೇ ಸಂದರ್ಭದಲ್ಲಿ ಭೂಮಿ ಮಂಜೂರಾತಿ ರೈತ ನರಸಿಂಹಯ್ಯ ಕುಟುಂಬಸ್ಥರು ಪಿಟಿಸಿಎಲ್ ಹೋರಾಟ ರಾಜ್ಯ ಅಧ್ಯಕ್ಷ ಮಂಜುನಾಥ್ ಪಿ.ವಿ.ಸಿ.(ಎಸ್) ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಹೋರಾಟಗಾರರಾದ ಬಾಣಸವಾಡಿ ಜಯರಾಮ್, ಮಂಜುನಾಥ್ ವಕೀಲ ಹರಿರಾಮ್ ಹೈಕೋರ್ಟ್ ವಕೀಲ ಈಶ್ವರಮೂರ್ತಿ ಭೀಮರಾವ್ ಕೃಷ್ಣಸ್ವಾಮಿ ಸುರೇಶ್ದೇವನಹಳ್ಳಿ ದಾಸರಬೀದಿ ಮುರುಳಿ ನಾಗವೇಣಿ ಹೋರಾಟ ಸಮಿತಿಯ ಮತ್ತು ಹಲವು ಸಂಘಟನೆಗಳಪದಾಧಿಕಾರಿಗಳು, ಪೊಲೀಸ್ ಮತ್ತು ಕಂದಾಯ ಇಲಾಖೆ, ಇಲಾಖೆ ಅಧಿಕಾರಿಗಳು ಇದ್ದರು.