ಕೋಲಾರ: ಕೋಲಾರ ತಾಲ್ಲೂಕು ಹರಟಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಶ್ರಯದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮತದಾರರ ಜಾಗೃತಿ ಜಾಥಾ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಪಂ ಕಾರ್ಯಾನಿರ್ವಹಣಾಧಿಕಾರಿ ಪಿ ಮುನಿಯಪ್ಪ ಮಾತನಾಡಿ ಮತದಾನದ ಮಹತ್ವ ಸಾರಿದಂತೆ ಪ್ರತಿಯೊಬ್ಬರೂ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಲು ಮನವಿ ಮಾಡಿದರು.
ಜಾಗೃತಿ ಜಾಥಾಗೆ ಚಾಲನೆ ನೀಡಿದ ಅವರು ಸಮಾಜದ ಪ್ರತಿಯೊಬ್ಬರಿಗೂ ಮತದಾನದ ಮಹತ್ವ ತಿಳಿಸಿಕೊಂಡು ನೂರರಷ್ಟು ಮತದಾನದ ಸಾಧನೆ ಮಾಡುವ ಪ್ರಯತ್ನಕ್ಕೆ ಸಹಕಾರ ನೀಡಿ. ಹಣ ಆಮೀಷಗಳಿಗೆ ಅವಕಾಶವಿಲ್ಲದೆ ನ್ಯಾಯ ಸಮ್ಮತ ಮತದಾನ ಪ್ರಕ್ರಿಯೆ ನಡೆಯಲು ಸಹಕಾರ ನೀಡಿ ಎಂದು ಅವರು ಕೋರಿದರು.
ಹರಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಮಾತನಾಡಿ ಮತದಾನ ಪವಿತ್ರ ಹಕ್ಕು ಇದನ್ನು ಪ್ರತಿಯೊಬ್ಬರೂ ಮಾಡಬೇಕು. ಈ ಮೂಲಕ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು ಎಂದರು. ಇದೇ ಸಂದರ್ಭದಲ್ಲಿ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಉಚಿತ ಪಠ್ಯ ಪುಸ್ತಕಗಳನ್ನು ತಾಲೂಕು ಪಂಚಾಯಿತಿ ಇ.ಓ. ವಿತರಿಸಿ, ವಿದ್ಯಾರ್ಥಿಗಳು ರಜೆ ಜೊತೆಗೆ ಪಾಠ ಕಲಿಯಲು ಸರ್ಕಾರ ನೀಡಿರುವ ಪಠ್ಯ ಪುಸ್ತಕದ ಜ್ಞಾನದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್, ತಾಲೂಕು ಪಂಚಾಯಿತಿಯ ಎಂ.ಆರ್.ಎಲ್.ಎಮ್ ಕಾರ್ಯಕ್ರಮ ವ್ಯವಸ್ಥಾಪಕ ವಿಜಯ್ ಕುಮಾರ್, ವಲಯ ಮೇಲ್ವಿಚಾರಕರಾದ ಆಶಾ. ಚೈತ್ರ ಮತ್ತಿತರರು ಉಪಸ್ಥಿತರಿದ್ದರು.
Leave a Review