ನೆಲಮಂಗಲ : 9ನೇ ವಾರ್ಡ್ ಹಾಗೂ ಸುತ್ತಮುತ್ತಲು ನೀರಿನ ಸಮಸ್ಯೆಇದೆ ಇದರ ಬಗ್ಗೆ ವಾಟರ್ ಮ್ಯಾನ್ ಗೆ ತಿಳಿಸಿದರೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದು ಅಧಿಕಾರಿಗಳಿಗೆ ತಿಳಿಸಿದರೆ ನಿರ್ಲಕ್ಷ ಮಾಡುತ್ತಿದ್ದಾರೆ ಒಂದು ದಿನ ನೀರಿಲ್ಲ ಎಂದರೆ ಇರುವುದೇ ಕಷ್ಟ ಅದರಲ್ಲಿ ಒಂದು ವಾರದಿಂದ ನೀರಿಲ್ಲ ಎಂದರೆ ಹೇಗೆ ವಾಸ ಮಾಡುವುದು ಎಂದು ನಗರ ಸಭೆ ಸದಸ್ಯ ರವಿ ಕುಮಾರ್ ಪ್ರತಿಭಟನೆ ನಡೆಸಿದರು.
ನಗರದ ನಗರಸಭೆ ಕಚೇರಿ ಎದುರು ವಾರ್ಡ್ ಜನರೊಂದಿಗೆ ಪ್ರತಿಭಟನೆ ನಡೆಸಿ ವಾರ್ಡ್ ವ್ಯಾಪ್ತಿಯ ಗಜಾರಿಯಾ ಬಡಾವಣೆ, ಬೆತ್ತನಗೆರೆ ರಸ್ತೆ, ಎಂ.ಜಿ. ರಸ್ತೆ, ವಾಜರಹಳ್ಳಿ ಸುತ್ತಮುತ್ತ ತಿಂಗಳಿನಿಂದ ನೀರಿನ ಸಮಸ್ಯೆ ಇದೆ ಜನರು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದರೆ.ಸಮಸ್ಯೆ ಬಗೆಹರಿಸುವುದಾಗಿ ಇಂಜಿನಿಯ ರನ್ನು ಕೇಳಿದರೆ, ತಮಗೆ ಸಂಬಂಧವೇ ಇಲ್ಲದಂತೆ ಮಾತನಾಡುತ್ತಾರೆ ನಗರಸಭೆ ಆಯುಕ್ತರ ಗಮನಕ್ಕೆ ತಂದರೆ ಜನರನ್ನು ಸಮಾಧಾನಪಡಿಸಿ ಎಂದು ಸಲಹೆ ನೀಡುತ್ತಾರೆ.
ನೀರು ಪೂರೈಕೆ ವಿಷಯವಾಗಿ ಜನರಿಗೆ ಉತ್ತರಿಸಲು ಆಗುತ್ತಿಲ್ಲ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರಸಭೆಯವರು ಪ್ರತಿವರ್ಷ ಕಂದಾಯ ಪಡೆಯುತ್ತಾರೆ. ಕಂದಾಯ ಪಾವತಿಸಲು ತಡವಾದರೆ ಅದಕ್ಕೆ ಬಡ್ಡಿ ಹಾಕುತ್ತಾರೆ. ಅದರಂತೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕಲ್ಲವೇ ಸರಿಯಾಗಿ ನೀರು ಪೂರೈಕೆ ಮಾಡದೇ ಇದ್ದರೆ ಇನ್ನು ಮುಂದೆ ಕಂದಾಯ ಕಟ್ಟುವುದಿಲ್ಲ.
ಅಧಿಕಾರಿಗಳು ಸ್ಪಂದನೆ ನೀಡದ ಪರಿಣಾಮ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಈಗಲೂ ಬಗೆಹರಿಯದಿದ್ದರೆ ನಗರಸಭೆ ಕಚೇರಿಯ ಎದುರು ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಗಜಾರಿಯಾ ಬಡಾವಣೆ ನಿವಾಸಿ ಅನಿತಾ ಎಚ್ಚರಿಸಿದರು.ನಗರ ಸಭೆ ಆಯುಕ್ತ ಮನುಕುಮಾರ್ ಮಾತನಾಡಿ ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣ ಸಮಸ್ಯೆ ಆಗಿದೆ ತಾತ್ಕಲಿಕವಾಗಿ ಖಾಸಗಿ ಕೊಳವೆ ಬಾವಿ ಮಾಲಿಕರಿಂದ ನೀರನ್ನು ಖರೀದಿ ಮಾಡಿ ಸಮಸ್ಯೆ ಬಗ್ಗೆ ಹರಿಸುವ ಪ್ರಯತ್ನ ಮಾಡುತ್ತಿದ್ದು ಸದ್ಯದಲ್ಲಿ ಹೊಸ ಕೊಳವೆ ಬಾವಿ ಕೊರೆದು ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.