ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಪಂಜಾಬ್ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ.
ಮಯಂಕ್ ಅಗರವಾಲ್ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಎಡಗೈ ಸ್ಪಿನ್ನರ್, ಹುಬ್ಬಳ್ಳಿಯ ಎ.ಸಿ. ರೋಹಿತ್ ಕುಮಾರ್ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದಾರೆ.
ಪಂಜಾಬ್ ತಂಡದ ಆರಂಭಿಕ ಬ್ಯಾಟರ್ ಪ್ರಭಸಿಮ್ರಾನ್ ಸಿಂಗ್ 5 ರನ್ ಗಳಿಸಿ ಮನೀಷ್ ಪಾಂಡೆಗೆ ಕ್ಯಾಚಿತ್ತು ನಿರ್ಗಮಿಸಿದರು. ವಿ.ಕೌಶಿಕ್ ಮೊದಲ ವಿಕೆಟ್ ಗಳಿಸಿದರು. ಮತ್ತೆ ಯಶಸ್ಸು ಕಂಡ ಕೌಶಿಕ್ ಪಂಜಾಬ್ನ ಎರಡನೇ ವಿಕೆಟ್ ಉರುಳಿಸಿದರು. ನಮನ್ ಧೀರ್ 4 ರನ್ ಗಳಿಸಿ ಔಟಾದರು. ಪಂಜಾಬ್ 12 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದೆ.