ಅರಸೀಕೆರೆ: ಶ್ರೀಮಾಲೇಕಲ್ ತಿರುಪತಿ ವೆಂಕಟರಮಣ ಸ್ವಾಮಿಯವರ ಜಲ ಕ್ರೀಡಾ ಮಂಟಪ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಶಿಲ್ಪಕಲಾ ಹಾಗೂ ಪೌರಾಣಿಕ ಪ್ರದರ್ಶನ ಸಂಪ್ರೋಕ್ಷಣ ಮಹೋತ್ಸವದ ಕಾರ್ಯಕ್ರಮವನ್ನು ವೆಂಕಟರಮಣಶ್ರೇಷ್ಠಿ ಅವರು ಕಟ್ಟಿರುವ ತೆಪ್ಪೋತ್ಸವದ ಕೊಳದಲ್ಲಿ ಅವರ ಪುತ್ರರಾದ ಶ್ರೀಧರ್ಮೂರ್ತಿ ಅವರ ಕುಟುಂಬ 9.11. 2023ರಿಂದ 10.11.2023 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರಾದ ಎಸ್ ವಿ ಟಿ ಬಾಬು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀನಿವಾಸಮೂರ್ತಿ ಮಾತನಾಡಿ ನಾವು ಸ್ವಂತ ಖರ್ಚಿನಲ್ಲಿ ತಿರುಪತಿಯ ಕಲ್ಯಾಣಿ ಮಂಟಪವನ್ನು ನಿರ್ಮಿಸಿದ್ದು ಕಲ್ಯಾಣಿಯಲ್ಲಿ ಪ್ರತಿ ವರ್ಷ ಜಾತ್ರೆಯಲ್ಲಿ ತೆಪ್ಪೋತ್ಸವ ನಡೆಯುತ್ತದೆ ದೇವರು ತೆಪ್ಪೋತ್ಸವದ ನಂತರ ಕಲ್ಯಾಣಿ ಮಧ್ಯಭಾಗದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಶ್ರೀನಿವಾಸ ಕಲ್ಯಾಣದ ಬಗ್ಗೆ ವಿವರವಾಗಿ ತಿಳಿಯಲು ಅಲ್ಲಿ ಅನೇಕ ವಿಗ್ರಹಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ ತಿರುಪತಿ ಯನ್ನು ಒಂದು ಯಾತ್ರಾ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸಿ ಶಿಲ್ಪಕಲೆಯ ಕೇಂದ್ರವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.ಈ ಪತ್ರಿಕಾಗೋಷ್ಠಿಯಲ್ಲಿ ಪಾರ್ಥಸಾರಥಿ,ಹರ್ಷ ಅರುಣ್ ಕುಮಾರ್ ಉಪಸಿತರಿದ್ದರು.