ಶ್ರೀನು ಮೈರಾ ಎಂಬ ಅದ್ದೂರಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದರು. ಈ ಬಹುಭಾಷಾ ಚಿತ್ರದ ಚಿತ್ರಕಥೆಯ ಕೆಲಸವೂ ಶುರುವಾಗಿದೆ.
ಕನ್ನಡ, ತೆಲುಗು ಸೇರಿ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಲಿರುವ ಈ ಚಿತ್ರ ದಕ್ಷಿಣ ಭಾರತದ ಉಳಿದೆಲ್ಲ ಭಾಷೆಗಳಿಗೂ ಡಬ್ ಆಗಲಿದೆ.
ಶೀಘ್ರದಲ್ಲೇ ನಿರ್ದೇಶಕ ಶ್ರೀನು, ಕಲಾವಿದರು ಹಾಗೂ ತಾಂತ್ರಿಕವರ್ಗದ ಅಪ್ಡೇಟ್ ಕೊಡಲಿದ್ದಾರೆ. ಅದಕ್ಕೂ ಮುನ್ನ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನೇಂದರೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರು ಮೈರಾ ಸಿನಿಮಾಕ್ಕೆ ಸಾಥ್ ನೀಡುತ್ತಾರೆ, ಸ್ಮೈಲ್ ಶ್ರೀನು ಅವರೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವುದು.
ಅದಕ್ಕೆ ಪೂರಕವಾಗಿ ಇಬ್ಬರೂ ಜತೆಗಿರುವ ಪೋಟೋಗಳೂ ಹರಿದಾಡುತ್ತಿವೆ. ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಈಗ ಸ್ಮೈಲ್ ಶ್ರೀನು ಸಿನಿಮಾಕ್ಕೆ ಸಾಥ್ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಈ ಬಗ್ಗೆ ಹೆಚ್ಚೇನೂ ಹೇಳದ ಶ್ರೀನು, ?ಪೂರಿ ಜಗನ್ನಾಥ್ ಅವರ ಜತೆ ಮಾತುಕತೆ ನಡೆದಿದೆ. ಅದರ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವೆ? ಎನ್ನುತ್ತಾರೆ.
ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ ಕನ್ನಡದ ತಂತ್ರಜ್ಞರು, ನಿರ್ದೇಶಕರು ಪರಭಾಷೆಯಲ್ಲೂ ದೊಡ್ಡ ಛಾಪು ಮೂಡಿಸುತ್ತಿದ್ದಾರೆ. ನಾನು ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡುವ ಮೂಲಕ ತೆಲುಗು ಇಂಡಸ್ಟ್ರಿಗೂ ಪರಿಚಿತನಾಗಿದ್ದೇನೆ. ಇದು ಕಂಪ್ಲೀಟ್ ಹೊಸ ಸ್ಟೈಲ್, ಈಗಿನ ಟ್ರೆಂಡ್ಗೆ ಹೊಂದುವಂಥ ಕಾನ್ಸೆಪ್ಟ್ ಒಳಗೊಂಡ ಬಿಗ್ ಬಜೆಟ್ ಚಿತ್ರ. ಬೃಹತ್ ತಾರಾಗಣದ ಜೊತೆಗೆ ತಾಂತ್ರಿಕ ವರ್ಗವೂ ಅದ್ಧೂರಿಯಾಗಿರಲಿದೆ. ಚಿತ್ರವೀಗ ಸ್ಕ್ರಿಪ್ಟ್ ಹಂತದಲ್ಲಿದ್ದು ಹಂತ ಹಂತವಾಗಿ ಎಲ್ಲ ಮಾಹಿತಿ ತಿಳಿಸುವೆ ಎಂಬುದು ನಿರ್ದೇಶಕ ಸ್ಮೈಲ್ ಶ್ರೀನು ಅನಿಸಿಕೆ.
ಇದನ್ನು ಹೊರತುಪಡಿಸಿ ಕನ್ನಡದಲ್ಲಿಯೇ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವುದಾಗಿ ಶ್ರೀನು ತಿಳಿಸಿದ್ದಾರೆ.