ಯಲಹಂಕ: ಬಿಜೆಪಿ ರಾಜ್ಯ ರೈತ ಮೋರ್ಚ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಬೆಂಗಳೂರಿನ ಐತಿಹಾಸಿಕ ಹೆಸರಘಟ್ಟ ಕೆರೆ ಸ್ವಚ್ಛತೆಗೆ ಚಾಲನೆ ನೀಡಿದರು.
ಗುರುವಾರ ಬೆಳಗ್ಗೆ ರೈತ ಮೋರ್ಚ ಹಾಗೂ ರೈತ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಹೆಸರುಗಟ್ಟ ಕೆರೆ ಅಂಗಳದಲ್ಲಿ ಬೆಳೆದಿದ್ದ ಗಿಡಗಂಟೆಗಳು ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಹಲವು ನಿರುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಕೆರೆ ಉಳಿಯುವಿಗೆ ಸಹಕರಿಸುವಂತೆ ಸ್ಥಳೀಯರಿಗೆ ಮನವಿ ಮಾಡಿದರು.
ಬಿಜೆಪಿ ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಮಾತನಾಡಿ ಹೆಸರುಗಟ್ಟ ಕೆರೆ ಬೆಂಗಳೂರು ನಗರದ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದು ವಿಸ್ತೀರ್ಣದಲ್ಲಿ ಬಹುದೊಡ್ಡ ಗಾತ್ರ ಹೊಂದಿದೆ. ಹಿಂದೆ ಈ ಕೆರೆಯು ಪ್ರತಿವರ್ಷ ಬರ್ತಿಯಾಗಿ ರೈತರು ಮತ್ತು ಮೀನುಗಾರರ ಜೀವ ನಾಡಿಯಾಗಿತ್ತು ಅಂತರ್ಜಲ ವೃದ್ಧಿಗೆ ಎಂಬು ನೀಡುತ್ತಿತ್ತು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿತ್ತು ಒಟ್ಟಾರೆ ಈ ಕೆರೆಯು ಸೌಂದರ್ಯದ ಖನಿಯಾಗಿತ್ತು.
ಕಾಲ ಸರಿದಂತೆ ಕೆರೆಗೆ ನೀರು ಹರಿದು ಬರುತ್ತಿದ್ದ ಜಲ ಮೂಲಗಳಾದ ರಾಜಕಾಲುವೆಗಳು ಸಂಪರ್ಕ ಕಾಲುವೆ ಒತ್ತುವರಿ ಯಾಗಿ ಕೆರೆಗೆ ನೀರು ಬರುತ್ತಿದ್ದ ಪ್ರಮಾಣ ಕಮ್ಮಿಯಾಗಿ ಕೆರೆ ತುಂಬುವುದೇ ದುಸ್ತರವಾಗಿದೆ ಇದರ ಮಧ್ಯೆ ಶಾಸಕ ಎಸ್ ಸರ್ ವಿಶ್ವನಾಥ್ ರವರ ಅನನ್ಯ ಕಾಳಜಿ ಹೆಸರುಗಟ್ಟ ಕೆರೆಯ ಪುನಶ್ಚೇತನ ಗೊಳಿಸಬೇಕೆಂಬ ಬಯಕೆಯ ನಿಮಿತ್ತ ಕೆರೆಯ ಪುನಶ್ಚೇತನಕ್ಕೆ ಸರ್ಕಾರದಿಂದ ಅಗತ್ಯ ಅನುದಾನವನ್ನು ತಂದು ಅಡಿಪಾಯವನ್ನು ಹಾಕಿದರು ಆರಂಭಿಕವಾಗಿ ಒತ್ತುವರಿಗೆ ಒಳಗಾಗಿದ್ದ ಕೆರೆಯ ನೀರಿನ ಮೂಲಗಳನ್ನು ನಿರ್ದಾಕ್ಷಣೆಯಾಗಿ ತೆರವುಗೊಳಿಸಿ ಕೆರೆಯ ಹೂಳು ತೆಗೆಸಿ ಇಂದಿನ ಮೆರೆಗೂ ಮರುಕಳಿಸುವಂತೆ ಮಾಡಿದರು.
ಕಳೆದ ಮೂರು ವರ್ಷಗಳಿಂದ ಕೆರೆಯು ಮತ್ತೆ ತುಂಬಿಕೊಳ್ಳುತ್ತಿದ್ದು ತನ್ನ ಗತವೈಭವಕ್ಕೆ ಮರಳಿರೂವುದು ಈ ಭಾಗದ ರೈತರ ಹಾಗೂ ಮೀನುಗಾರರ ಮುಖದಲ್ಲಿ ಸಂತಸ ಮೂಡಿಸಿದೆ.ಹೆಸರುಗಟ್ಟ ಕೆರೆ ತುಂಬಿಕೊಳ್ಳುತ್ತಿದ್ದಂತೆ ಬೆಂಗಳೂರು ಜಲ ಮಂಡಳಿ ಕೆರೆಯ ನೀರನ್ನು ನಗರಕ್ಕೆ ಹರಿಸಲು ಮುಂದಾಗಿದ್ದಾಗ ಉಗ್ರ ಹೋರಾಟದ ಮೂಲಕ ಕೆರೆಯ ನೀರನ್ನು ಹರಿಸದಂತೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಹೆಸರುಗಟ್ಟ ಕೆರೆ ಸಮೃದ್ಧವಾಗಿದೆ ಆ ಕಾರಣಕ್ಕೆ ಕೆರೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚ ಬೆಂಗಳೂರುಉತ್ತರ ಜಿಲ್ಲಾಧ್ಯಕ್ಷರಾದ ಜಿ ಜೆ ಮೂರ್ತಿ, ಯಲಹಂಕಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್ ಸಿ ರಾಜೇಶ್,
ಉಪಾಧ್ಯಕ್ಷ ಪಿ. ಕೆ. ರಾಜಣ್ಣ ರಾಜ್ಯ ರೈತ ಸಂಘದ ಮುಖಂಡರಾದ ನಂಜುಂಡಪ್ಪ ಮಾವಳ್ಳಿ ಪುರ ಶ್ರೀನಿವಾಸ್, ಟಿ ರಾಜು,ಎಂ ಕೆ ಲಕ್ಷ್ಮಣ್, ರಂಗನಾಥ್ ಹಾಗೂ ಸಂಘಟನೆ ಯ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು