ತಿ. ನರಸೀಪುರ: ಗ್ರಾಮ ಪಂಚಾಯಿತಿಯಲ್ಲಿ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಸದಸ್ಯರ ಮತ್ತು ಮುತ್ತಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಸಹಕಾರದೊಂದಿಗೆ ಮುತ್ತಲವಾಡಿ ಪಂಚಾಯಿತಿಯನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಪುಷ್ಪ ಬಸವರಾಜ್ ಹೇಳಿದರು.
ತಾಲೂಕಿನ ಮುತ್ತಲವಾಡಿ ಗ್ರಾಮ ಪಂಚಾಯತಿ ಆವರಣದಲ್ಲಿ ಗ್ರಾಮಸಭೆ ಮುತ್ತಲವಾಡಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜನೆ ಮಾಡಿದ್ದ ಗ್ರಾಮ ಸಭೆಯನ್ನು ಕುರಿತ ಮಾತನಾಡಿದವರು ಸಾರ್ವಜನಿಕರು ಪಂಚಾಯಿತಿನ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿಪ್ಪುನೆರಳೆ ಬೆಳೆಗಾರರಿಗೆ ಸರ್ಕಾರದಿಂದ ಸಹಾಯ ಧನವನ್ನು ನೀಡಲಾಗುತ್ತಿದ್ದು, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಗೃಹ ನಿರ್ಮಾಣಕ್ಕಾಗಿ 90%ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ 50%ರಷ್ಟು ಸಹಾಯ ಧನವನ್ನು ನೀಡಲಾಗುವುದು ಎಂದು ರೇಷ್ಮೆ ಇಲಾಖೆ ಕೆಂಪರಾಜು ಹೇಳಿದರು.
ಈ ಸಂದರ್ಭ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಕೆ.ಎಂ. ರಮೇಶ್, ಶಿವಸ್ವಾಮಿ, ನಾಗರತ್ನಮ್ಮ, ಪಿ ಮಹದೇವಯ್ಯ, ಸಿದ್ದಮ್ಮ ಎಂ ನಾಗೇಶ್, ನಾಗಮಣಿ, ಆರ್ ಸರಸ್ವತಿ, ರೇಖಾ, ಮಹಾಲಿಂಗ ಸ್ವಾಮಿ, ಮಂಗಳಮ್ಮ, ಮಂಜುಳಾ, ಪ್ರಕಾಶ್, ಸಿದ್ದರಾಜು, ಮಹದೇವ, ಪಿಡಿಓ ನಿರ್ಮಲ, ಕೆನರಾ ಬ್ಯಾಂಕ್ ನ ರಮೇಶ್ ರಾವ್ ಹಾಗೂ ಗ್ರಾಮಸ್ಥರು ಹಾಜರಿದ್ದರು.