ಗೌರಿಬಿದನೂರು: ಕಲ್ಯಾಣ ಕ್ರಾಂತಿ ವೇಳೆಯಲ್ಲಿ ಅನುಭವ ಮಂಟಪದ ಜವಾಬ್ದಾರಿ ಹೊತ್ತು ಅತ್ಯಮೂಲ್ಯವಾದ ವಚನಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಮಾಡಿವಾಳ ಮಾಚೀದೇವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ,ಎಚ್,ಪುಟ್ಟಸ್ವಾಮಿ ಗೌಡ ತಿಳಿಸಿದರು,
ನಗರದ ಹೊರವಲಯದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಅಡಳಿತದಿಂದ ಅಯೋಜನೆ ಮಾಡಿದ್ದ “ವೀರ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಡಿವಾಳ ಸಮುದಾಯದವರು ಮೂಲತಃ ಶ್ರಮಿಜೀವಗಳು ಎಂದರೆ ತಪ್ಪಗಲಾರದು ತಮ್ಮ ಕುಲ ವೃತ್ತಿ ನಂಬಿ ಸ್ವಾಭಿಮಾನ ಬದುಕು ನಡೆಸುವ ಇವರು ಸಮಾಜ ಪ್ರಮುಖ ಅಂಗವಾಗಿದ್ದಾರೆ,
ಇವರಿಗೆ ಸಮಾಜ ನೆರವು ಅನಿವಾರ್ಯ ಸರ್ಕಾರದ ಸವಲತ್ತು ನೀಡಲು ಅಧಿಕಾರಿಗಳು ಶ್ರಮಿಸಬೇಕು ಎಂದ ಅವರು ಮಾಡಿವಾಳ ಮಾಚಿದೇವರು ಬಸವಣ್ಣನವರ ಅತ್ಮೀಯ ಶಿವಶರಣ ಅಗಿದ್ದರು ಇವರು ವಚನಕಾರರು ಜೊತೆಗೆ ವೀರತ್ವ ಶೂರತ್ವ ಸ್ವಾಭಾವದವರು ಅಗಿದ್ದರು ಈ ನಿಟ್ಟಿನಲ್ಲಿ ಬಸವಣ್ಣನವರು ಮಾಚಿದೇವರಿಗೆ ಲೇಖನಿ ಜೊತೆಗೆ ಖಡ್ಗ ಕೊಟ್ಟಿದ್ದರು, ಅನುಭವ ಮಂಟಪದ ರಕ್ಷಣೆ ಹೊಣೆ ಇವರಿಗೆ ವಹಿಸಿದ್ದರು.
ಅದರೆಂತೆ ಇವರು ಕಲ್ಯಾಣ ಕ್ರಾಂತಿ ವೇಳೆಯಲ್ಲಿ ಬಿಜ್ಜಾಳ ರಾಜನಿಗೆ ಮತ್ತು ಶಿವಶರಣ ಯುದ್ದ ಅದ ಸಂದರ್ಭದಲ್ಲಿ ಸೈನಿಕರು ವಚನಗಳನ್ನು ಸುಡುವ ಮಾಹಿತಿ ತಿಳಿದು ಕೂಡಲೆ ಅವುಗಳನ್ನು ರಾಹಸ್ಯ ಸ್ಥಳದಲ್ಲಿ ರಕ್ಷಣ ಮಾಡಿದ ಫಲವೇ ಇಂದು ಬಸವಣ್ಣ ವಚನಗಳು ನಮಗೆ ಲಭ್ಯವಾಗಿದೆ ಎಂದರು.
ಪ್ರಮುಖ ಭಾಷಣಗಾರ ಗಿರಿಧರ್ ಮಾತನಾಡಿ ಮಾಚಿದೇವರು ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಸುಜ್ಞಾನವ್ವ-ಪರುವತಯ್ಯ ದಂಪತಿಗಳಿಗೆ ಜನಸಿದರು, ಇವರ ಕಾಲ ಕ್ರಿ,ಶ,1120-1130 ಎಂದು ಇತಿಹಾಸದಲ್ಲಿ ಇದೆ, ಇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಾಗಿ ಸೇರಿ ಸಮಾಜ ಅಂಕುಡೊಂಕು ತಿದ್ದುವಲ್ಲಿ ಪ್ರಮುಖರಾದರು, ಜೊತೆಗೆ ಇವರು ರಚಿಸಿ ವಚನಗಳು 339 ಹೆಚ್ಚು ನಮಗೆ ಲಭ್ಯವಾಗಿದೆ, ಕಾಯಕ ನಿಷ್ಥೆಗೆ ಇವರು ಹೆಸರು ವಾಸಿ ಅದರು ಎಂದರು.
ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ ಮಡಿವಾಳ ಸಮುದಾಯವರು ತಮ್ಮ ಕುಲ ವೃತ್ತಿ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳನ್ನು ಉನ್ನತ ವಿಧ್ಯಾಭ್ಯಾಸ ನೀಡಬೇಕು ಮತ್ತು ಏನು ಇಂದು ತಮ್ಮ ಬೇಡಿಕೆಗಳಲ್ಲಿ ಒಂದಾದ ದೋಭಿಘಾಟ್ ಹದ್ದುಬಸ್ತು ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದಿರಿ ಅದನ್ನು ಒಂದು ವಾರದಲ್ಲಿ ಕಾರ್ಯರೂಪಕ್ಕೆ ತಂದು ಕೊಡುವೆ ಎಂದರು.
ಇದೇ ವೇಳೆಯಲ್ಲಿ ಕೆ,ಎಚ್,ಪಿ, ಮುಖ್ಯಕಾರ್ಯನಿರ್ವಹಕ ಶ್ರೀನಿವಾಸಗೌಡ. ಮಡಿವಾಳ ಸಂಘದ ಅಧ್ಯಕ್ಷ ಬಿ,ಎನ್,ನರಸಿಂಹಮೂರ್ತಿ, ರಾಜ್ಯ ಮಡಿವಾಳ ಸಂಘ ನಿರ್ದೇಶಕರಾದ ರಾಕೇಶ್ ತಾಲ್ಲೂಕು ಕಾರ್ಯದರ್ಶಿ ವೆಂಕಟಸ್ವಾಮಿ, ಖಜಾಂಚಿ ಕೆಂಪರಾಜು ಮುದುಗೆರೆ ಆಶ್ವತ್ಥಪ್ಪ, ಮಹಿಳಾ ಘಟಕದ ಲಯನ್ ಲಕ್ಷ್ಮೀ ಸುದರ್ಶನ್ ಸೂರಜ್ ಎನ್ ಬಾಬಣ್ಣ ಮುಂತಾದವರು ಹಾಜರಿದ್ದರು.