ನವದೆಹಲಿ: ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಏಷ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿ ರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಲೇಷ್ಯಾದ ಶಾ ಆಲಮ್ನಲ್ಲಿ ಫೆ. 13 ರಿಂದ 19ರವರೆಗೆ ಈ ಟೂರ್ನಿ ನಡೆಯಲಿದೆ.ವಿಶ್ವದ 8ನೇ ಕ್ರಮಾಂಕದ ಆಟಗಾರ ಎಚ್.ಎಸ್.ಪ್ರಣಯ್ ತಂಡದ ನಾಯಕತ್ವ ವಹಿಸುವರು. ಕಳೆದ ವರ್ಷ ಫ್ರೆಂಚ್ ಓಪನ್ ಟೂರ್ನಿಯ ವೇಳೆ ಸಿಂಧು ಗಾಯಾಳಾಗಿದ್ದರು. ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗೆ ಅಮೂಲ್ಯ ಕ್ವಾಲಿಫಿಕೇಷನ್ ಪಾಯಿಂಟ್ಗಳನ್ನು ಪಡೆಯುವ ದೃಷ್ಟಿಯಿಂದ ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ಈ ಟೂರ್ನಿ ಮಹತ್ವದ್ದು.
ಸಿಂಧು ಅಲ್ಲದೇ, ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಆಗಿರುವ 16ರ ಹರೆಯದ ಅನ್ಮೋಲ್ ಖಾರ್ಬ್, ಏಷ್ಯ ಜೂನಿಯರ್ ಚಾಂಪಿಯನ್ಷಿಪ್ನ ಪದಕ ವಿಜೇತೆ ತನ್ವಿ ಶರ್ಮಾ, ಅಶ್ಮಿತಾ ಚಾಲಿಹಾ ಅವರೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅವಕಾಶ ಪಡೆದಿದ್ದಾರೆ.