ಕೌಲಾಲಂಪುರ: ಕೆಲವು ದಿನಗಳ ಬ್ರೇಕ್ ಮುಗಿಸಿದ ಪಿ.ವಿ. ಸಿಂಧು, ಮಂಗಳವಾರದಿಂದ ಆರಂಭವಾಗಲಿರುವ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಡಲಿಳಿಯಲಿದ್ದಾರೆ.
ಸಿಂಧು ಉಬೆರ್ ಕಪ್ ಮತ್ತು ಥಾಯ್ಲೆಂಡ್ ಓಪನ್ ಕೂಟದಿಂದ ಹೊರಗುಳಿದಿದ್ದರು. ಅಲ್ಲದೇ ಪ್ರಶಸ್ತಿ ಬರಗಾಲವೂ ಎದುರಾಗಿತ್ತು.2022ರ ಸಿಂಗಾಪುರ್ ಓಪನ್ ಚಾಂಪಿಯನ್ ಆದ ಬಳಿಕ ಯಾವುದೇ ಪ್ರಶಸ್ತಿ ಜಯಿಸಿರಲಿಲ್ಲ.
ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಮಲೇಷ್ಯಾ ಪಂದ್ಯಾವಳಿ ಸಿಂಧು ಪಾಲಿಗೆ ಮಹತ್ವದ್ದಾಗಿ ಪರಿಣಮಿಸಿದೆ. ಸ್ಟಾರ್ ಆಟಗಾರ್ತಿಯರಾದ ಅನ್ ಸೆ ಯಂಗ್, ಚೆನ್ ಯು ಫೀ, ಅಕಾನೆ ಯಮಾಗುಚಿ, ಕ್ಯಾರೋಲಿನ್ ಮರಿನ್ ಮೊದಲಾದವರು ಈ ಕೂಟದಲ್ಲಿ ಆಡುತ್ತಿಲ್ಲ. ಹೀಗಾಗಿ ಮುಂದಿನ ಪೀಳಿಗೆಯ ಯುವ ಆಟಗಾರ್ತಿಯರ ಸವಾಲನ್ನು ಸಿಂಧು ಎದುರಿಸಬೇಕಿದೆ.